ವಿಜಯನಗರಕ್ಕೆ ಉದ್ದ ಕತ್ತಿನ ವಿಶೇಷ ಅತಿಥಿಯ ಆಗಮನ!

ಈ ಜಿರಾಫೆಗೆ ಇನ್ನೂ 4 ವರ್ಷ ಮಾತ್ರ. ವಿಶೇಷ ಬೋನು ಅಳವಡಿಸಿ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಜಿರಾಫೆಯನ್ನ ಶಿಫ್ಟ್ ಮಾಡಲಾಗಿದೆ.

ನಾಲ್ಕು ದಿನಗಳ ಕಾಲ ರಸ್ತೆಮಾರ್ಗದ ಮೂಲಕ ಬಿಹಾರದಿಂದ ಜಿರಾಫೆಯನ್ನು ಕರೆತರಲಾಗಿದೆ.

ಜಿರಾಫೆ ವಿಜಯನಗರದ ಸ್ಥಳೀಯರ ಸಂತಸ ಹೆಚ್ಚಿಸಿದೆ

ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೃಗಾಲಯಕ್ಕೆ ಆಗಮಿಸಿ ಜಿರಾಫೆ ನೋಡಿ ಸಂಭ್ರಮಿಸ್ತಿದ್ದಾರೆ.

ಬಿಹಾರದಿಂದ ನಮ್ಮ ಕರ್ನಾಟಕದ ವಿಜಯನಗರಕ್ಕೆ ಅತಿಥಿಯೊಬ್ರು ಆಗಮಿಸಿದ್ದಾರೆ!

2017 ರಲ್ಲಿ ಪ್ರಾರಂಭಿಸಲಾದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ ರಾಜ್ಯದ ಮೂರನೇ ಹುಲಿ ಮತ್ತು ಸಿಂಹ ಸಫಾರಿ ಸ್ಥಳವಾಗಿದೆ.

ಈ ಜಿರಾಫೆಗಾಗಿ ಈಗಾಗಲೇ ವಿಶೇಷವಾದ ಆವರಣವನ್ನು ಸಿದ್ಧಪಡಿಸಲಾಗಿದೆ

ಜಿರಾಫೆಗೆ ಬೇಕಾದ ಆಹಾರ ಹಾಗೂ ಆರೈಕೆಯ ವ್ಯವಸ್ಥೆಯನ್ನು ಮಾಡಲಾಗಿದೆ.

ಮೈಸೂರು ಮೃಗಾಲಯದಿಂದ ಮತ್ತೊಂದು ಜಿರಾಫೆ ತರಲು ತೀರ್ಮಾನಿಸಲಾಗಿದೆ.