ಈ ಗುಲಾಬಿಯು ನಿನಗಾಗಿ, ಇದು ಚೆಲ್ಲುವ ಪರಿಮಳ ನಿನಗಾಗಿ ಅನ್ನೋ ಕನ್ನಡದ ಸೂಪರ್ ಹಿಟ್ ಹಾಡಿನ ಸಾಲು ಈ ಗಾರ್ಡನ್ ನೋಡ್ತಿದ್ರೆ ನೆನಪಿಗೆ ಬರಲೇಬೇಕು.
ವ್ಯಾಲೆಂಟೈನ್ಸ್ ದಿನ ಆಗಿರೋದ್ರಿಂದ ಇನ್ನೊಂದಿಷ್ಟು ನೆನಪುಗಳನ್ನ ಈ ಗುಲಾಬಿ ಹೂಗಳು ಮೆಲುಕು ಹಾಕಿಸೋದು ಗ್ಯಾರಂಟಿ.
ಪ್ರೇಮಿಗಳ ಪ್ರೇಮದ ಸಂಕೇತವಾದ ಕೆಂಪು ಗುಲಾಬಿ ಸಾಲು ಸಾಲಾಗಿ ತಲೆ ಎತ್ತಿ ನಿಂತಿವೆ. ತನ್ನತ್ತ ವ್ಯಾಲೆಂಟೈನ್ಸ್ ಡೇ ಪ್ರೇಮಿಗಳನ್ನ ಬರ ಮಾಡಿಕೊಳ್ಳಲು ಇಲ್ಲಿ ಸಿದ್ಧವಾಗಿದೆ.
ಪ್ರೇಮಿಗಳ ಪಾಲಿಗೆ ವ್ಯಾಲೆಂಟೈನ್ಸ್ ಡೇ ಅನ್ನೋದು ಹಬ್ಬವಿದ್ದಂತೆ.
ಕದ್ದು ಮುಚ್ಚಿ ಭೇಟಿಯಾಗೋ ಪ್ರೇಮಿಗಳೆಲ್ಲ ಪಾರ್ಕ್ ಗಳಲ್ಲಿ ಮರ ಸುತ್ತೋದು ವಾಡಿಕೆ.
ವಿಜಯಪುರದ ಆಲಮಟ್ಟಿ ಉದ್ಯಾನವನದ ಈ ರೋಸ್ ಗಾರ್ಡನ್ ನಲ್ಲಿರೋ ರೋಸ್ಗಳೆಲ್ಲವೂ ನಳನಳಿಸುತ್ತಾ ಪ್ರೇಮಿಗಳ ನೋಡುವ ಕಾತರದಲ್ಲಿದೆ.
ಒಂದು ವರ್ಷದ ಹಿಂದೆ KBJNL ವ್ಯಾಪ್ತಿಯ ಸುಮಾರು ಎರಡು ಎಕರೆ ಬಯಲು ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತರಹೇವಾರಿ ಗುಲಾಬಿ ಸಸಿಗಳನ್ನ ನರ್ಸರಿಯಲ್ಲಿ ತಯಾರಿಸಿ, ಬಯಲು ಪ್ರದೇಶದಲ್ಲಿ ನಾಟಿ ಮಾಡಿದ್ದರು.
ಸದ್ಯ ಗುಲಾಬಿ ಹೂವಿನ ಗಿಡಗಳು ಸಮೃದ್ದವಾಗಿ ಬೆಳೆದು ನಿಂತಿದ್ದು ಇಲ್ಲಿಗೆ ಆಗಮಿಸುವ ಪ್ರೇಮಿಗಳಿಗೆ, ಪ್ರವಾಸಿಗರಿಗೆ ಮುದ ನೀಡುತ್ತಿವೆ.
ಬಿಳಿ, ಕೆಂಪು, ಆರೆಂಜ್ ಸೇರಿದಂತೆ ಹತ್ತು ಹಲವಾರು ಬಗೆ ಬಗೆಯ ಗುಲಾಬಿ ಹೂವುಗಳು ಸುಂದರವಾಗಿ ಅರಳಿ ನಿಂತಿವೆ. ಇಲ್ಲಿಗೆ ಕೇವಲ 50 ರೂ. ನೀಡಿ ಟಿಕೆಟ್ ಪಡೆದುಕೊಂಡು ಒಳಪ್ರವೇಶಿಸಬಹುದು.
ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8ರ ವರೆಗೂ ಎಂಜಾಯ್ ಮಾಡಬಹುದು.