ಸಿದ್ಧಾರೂಢ ಸ್ವಾಮಿಗಳ ಜಾತ್ರೆಗೆ ಪಾದಯಾತ್ರೆ
ತಲೆ ಮೇಲೆ ಕೇಸರಿ ಟೋಪಿ, ರಸ್ತೆಗಳಲ್ಲಿ ಕೇಸರಿ ಧ್ವಜ ಹಿಡಿದುಕೊಂಡು ಸಾಗುತ್ತಿರುವ ಭಕ್ತರು
ಕಲಬುರಗಿಯ ನೂರಾರು ಜನ ಸದ್ಭಕ್ತರು ಹುಬ್ಬಳಿಯಲ್ಲಿ ನಡೆಯಲಿರುವ ಸಿದ್ಧಾರೂಢ ಸ್ವಾಮಿಗಳ ಜಾತ್ರೆಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ.
ಸದ್ಭಕ್ತರು ದಾರಿ ಉದ್ದಕ್ಕೂ ಭಜನೆ, ಕೀರ್ತಿನೆ, ಸಂಗೀತ ಹಾಡುತ್ತಾರೆ
ದಿನಕ್ಕೆ ಎರಡು ಬಾರಿ ಯಾತ್ರೆಯಲ್ಲಿ ಸಿದ್ಧಾರೂಢರ ಭಾವಚಿತ್ರಕ್ಕೆ ವಿಶೇಷ ಪೂಜೆ ಜರುಗುತ್ತದೆ.
ಆಳಂದ ಪಟ್ಟಣದಿಂದ ಹುಬ್ಬಳ್ಳಿ ಸರಿ ಸುಮಾರು 400 ಕಿಲೋಮೀಟರ್ ಆಗುತ್ತದೆ
400 ಕಿಲೋಮೀಟರ್ ದೂರವನ್ನ ಯಾತ್ರಾರ್ಥಿಗಳು ಒಂದು ತಿಂಗಳವರೆಗೆ ನಡೆದು ಸಾಗುತ್ತಾರೆ.
ಭಕ್ತರು ದಿನಕ್ಕೆ ಕೇವಲ 35 ಕಿಲೋಮೀಟರ್ ನಡೆಯುತ್ತಾರೆ.
ಈ ಯಾತ್ರೆಯಲ್ಲಿ ರೈತರು, ಕಟ್ಟಡ ಕಾರ್ಮಿಕರು, ದಿನಗೂಲಿ ಕೆಲಸಗಾರರು ಭಾಗವಹಿಸುತ್ತಾರೆ
ರಸ್ತೆ ಉದ್ದಕ್ಕೂ ಭಕ್ತರು ನೀರು, ಮಜ್ಜಿಗೆ, ಪಾನಕ, ಊಟದ ವ್ಯವಸ್ಥೆಯನ್ನ ಮಾಡಿರುತ್ತಾರೆ.