ಕೆಂಪೇಗೌಡ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಹಲವು ವಿಶೇಷತೆಗಳನ್ನು ಹೊಂದಿದೆ.

5ಜಿ ಸೇವೆಯನ್ನು ಹೊಂದಿರುವ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಗಮಗಿಸುವ ದೀಪಗಳ ಮಧ್ಯೆ ತಾರಸಿಯಿಂದ ಇಳಿಬಿದ್ದಿರುವ ಕಿರು ಉದ್ಯಾನಗಳಯ ಪ್ರಯಾಣಿಕರನ್ನು ಅಚ್ಚರಿಗೊಳಪಡಿಸುತ್ತವೆ.

ಸುಂದರವಾದ ಟರ್ಮಿನಲ್ನಲ್ಲಿ 180 ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಜಾತಿಯ ಗಿಡಗಳಿವೆ.

800 ವರ್ಷಗಳ ಹಳೆಯದಾದ ಮರಗಳು ಸೇರಿ ಒಟ್ಟು 6 ಲಕ್ಷಕ್ಕೂ ಹೆಚ್ಚು ಸಸ್ಯ ಪ್ರಭೇದಗಳು ವಿಮಾನ ನಿಲ್ದಾಣದ ಆವರಣದಲ್ಲಿವೆ.

ಜೊತೆಗೆ ಸ್ವಯಂಚಾಲಿತ ಫೇಸ್​ ಬಯೋಮೆಟ್ರಿಕ್​ ಗೇಟ್​.

ಸೆಲ್ಫ್​ ಬ್ಯಾಗೇಜ್​-ಡ್ರಾಪ್​ ಕೌಂಟರ್​, ಬಾಡಿ ಸ್ಕ್ಯಾನರ್​ ಹಾಗೂ ಆಟೋಮ್ಯಾಟಿಕ್ ಟ್ರೇ ಮರುಪಡೆಯುವಿಕೆ ಸೇರಿದಂತೆ ಅತ್ಯುತ್ತಮ ತಂತ್ರಜ್ಞಾನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಹಾಗಾಗಿ ಈ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಹೊಸ ಚೈತನ್ಯ ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಯ ಭಾಗವಾಗಿ ನಿರ್ಮಾಣವಾಗಿರುವ ಟರ್ಮಿನಲ್ 2 ಗೆ13000 ಸಾವಿರ ಕೋಟಿ ವೆಚ್ಚವಾಗಿದೆ.

ಇದನ್ನು ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು.