ಅಯೋಧ್ಯೆಯಂತೆ ಆಗಲಿದೆಯಂತೆ ಅಂಜನಾದ್ರಿ!
ಕೊಪ್ಪಳ ಜಿಲ್ಲೆಯಲ್ಲಿರುವ ಆಂಜನೇಯ ದೇವಸ್ಥಾನವೇ ಪವಿತ್ರ ಅಂಜನಾದ್ರಿ ದೇಗುಲ
ಈ ದೇಗುಲವನ್ನೇ ಹನುಮಾನ್ ದೇವರು ಹುಟ್ಟಿದ ದೇವಾಲಯ ಎಂದು ಹೇಳುತ್ತಾರೆ
ಅಂಜನಾದ್ರಿಯನ್ನು ವಿಶ್ವಮಟ್ಟದಲ್ಲಿ ಅಭಿವೃದ್ದಿಪಡಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ
ಬಸವರಾಜ ಬೊಮ್ಮಾಯಿ ಕಳೆದ ವರ್ಷ ಮಂಡಿಸಿದ ಬಜೆಟ್ನಲ್ಲಿ 100 ಕೋಟಿ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದರು
ಕಳೆದಬಾರಿಯಂತರ, ಈ ಬಾರಿ ಬಜೆಟ್ನಲ್ಲಿ ಮತ್ತೆ ಕೊಪ್ಪಳ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ.
ಕಳೆದ ಬಜೆಟ್ನಂತೆ ಈ ಬಾರಿಯ ಬಜೆಟ್ನಲ್ಲಿ ಮತ್ತೆ ಕೊಪ್ಪಳ ವಿವಿ ಆರಂಭಿಸುವುದಾಗಿ ಹೇಳಲಾಗಿದೆ
ಈ ಬಾರಿಯ ಬಜೆಟ್ನಲ್ಲಿ ಆನೆಗೊಂದಿಯ ಗಗನ ಮಹಲ್ ಅಭಿವೃದ್ದಿ ಹೊರತುಪಡಿಸಿ ಉಳಿದ ಯಾವುದೇ ಘೋಷಣೆಗಳಿಲ್ಲ.
ಕಳೆದ ಬಾರಿ ಕಿನ್ನಾಳ ಕಲೆ ಜಿಲ್ಲೆಯಲ್ಲಿ ಅಭಿವೃದ್ದಿಗಾಗಿ ಯೋಜನೆ ರೂಪಿಸುವುದಾಗಿ ಹೇಳಲಾಗಿತ್ತು
ಆದರೆ ಈ ಬಾರಿಯ ಬಜೆಟ್ನಲ್ಲಿ ಈ ಬಗ್ಗೆ ಪ್ರಸ್ತಾಪವೇ ಇಲ್ಲ