ಅಳಿಯನಿಗಾಗಿ 108 ಬಗೆಯ ಭಕ್ಷ್ಯಗಳು!

ಆಂಧ್ರ ಪ್ರದೇಶದಲ್ಲಿ ಅಳಿಯ ಮದುವೆಯಾದ ಮೊದಲ ಬಾರಿಗೆ ಅತ್ತೆ-ಮಾವನ ಮನೆಗೆ ಬಂದರೆ, ಅವರನ್ನು ವಿಶೇಷವಾಗಿ ಸ್ವಾಗತಿಸುತ್ತಾರೆ

ಅಂತದ್ದೆ ಘಟನೆ ಆಂದ್ರ ಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ

ಅಂಧ್ರ ಪ್ರದೇಶದ ನೇಲ್ಲೂರು ಜಿಲ್ಲೆಯ ಪೊದಕಲೂರು ಮಂಡಲದ ಉಚ್ಚಪಲ್ಲಿಯಲ್ಲಿ ಹೊಸ ಅಳಿಯನಿಗಾಗಿ ಸಿದ್ದವಾಗಿತ್ತು 108 ಖಾದ್ಯಗಳು

ಉಚ್ಚಪಲ್ಲಿಯ ನಿವಾಸಿಗಳಾದ ಊಸ ಶಿವಕುಮಾರ್ ಮತ್ತು ಶ್ರೀದೇವಮ್ಮ ಅವರು ತಮ್ಮ ಅಳಿಯನಿಗಾಗಿ ಬಗೆ ಬಗೆಯ ಭಕ್ಷ್ಯಗಳನ್ನು ರೆಡಿ ಮಾಡಿದ್ರು

ಊಸ ಶಿವಕುಮಾರ್ ಮತ್ತು ಶ್ರೀದೇವಮ್ಮ ತಮ್ಮ ಮಗಳಾದ ಶ್ರೀವಾಣಿಯನ್ನು ಇಮ್ಮಡಿಸೆಟ್ಟಿ ಶಿ‌‌ವಕುಮಾರ್‌ಗೆ ಕೊಟ್ತು ಇತ್ತೀಚೆಗೆ ಮದುವೆ ಮಾಡಿದರು

ಮದುವೆಯಾಗಿ ಮೊದಲ ಬಾರಿಗೆ ಮನೆಗೆ ಬಂದ ಅಳಿಯನಿಗಾಗಿ 108 ಬಗೆಯ ರುಚಿಕರ ತಿನ್ನಿಸುಗಳನ್ನು ತಯಾರಿಸಿ ಬಡಿಸಿದರು

ಮೆನೂನಲ್ಲಿ ಮಟನ್, ಚಿಕನ್, ಮೀನು, ಸೀಗಡಿ, ರಸಂ, ಸಾಂಬರ್, ಮೊಸರು ಸೇರಿದಂತೆ ಇನ್ನೂ ವಿವಿಧ ಪೇಸ್ಟ್ರೀಗಳು ಮತ್ತು ಸಿಹಿತಿಂಡಿಗಳನ್ನು ಒಳಗೊಂಡಿದೆ

ಅಳಿಯನ ಹೆಸರೂ ಶಿವಕುಮಾರ್, ಹೆಣ್ಣು ಕೊಟ್ಟ ಮಾವನ ಹೆಸರೂ ಕೂಡಾ ಶಿವಕುಮಾರ್

ಸಧ್ಯ ಈ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ