2 ಎಕರೆಯಲ್ಲಿರೋ ಈ ಮನೆಗೆ 48 ಕೋಣೆ, 108 ಬಾಗಿಲು

ಭೂಸನೂರು ಗ್ರಾಮದ ನಿವಾಸಿಯಾಗಿರುವ ಧರ್ಮರಾಜ್ ಸಾಹು ಎಂಬುವವರಿಗೆ ಸೇರಿದ ಈ ಮನೆ ಸುಮಾರು 200 ವರ್ಷಗಳ ಹಳೆಯ ಮನೆಯೆಂದು ಊಹಿಸಲಾಗಿದೆ.

ಇಂದಿಗೂ ಸುಭದ್ರವಾಗಿರುವ ಈ ಮನೆಯಲ್ಲಿ ಐದನೇ ತಲೆಮಾರಿನ ಕುಟುಂಬ ಇದನ್ನ ನಿರ್ವಹಿಸುತ್ತಾ ಬಂದಿದೆ

ಧರ್ಮರಾಜ್ ಸಾಹು ಅವರ ಮುತ್ತಜ್ಜನವರ ಅಜ್ಜ ಬಸಪ್ಪ ಸಾಹು ಎಂಬುವರು ಈ ಮನೆಯನ್ನು ನಿರ್ಮಿಸಿದ್ರಂತೆ

ಮೂರಂತಸ್ತಿನ ಈ ಮನೆ ಹಲವು ಸಿನೆಮಾ ಶೂಟಿಂಗ್ ಗೂ ಬಳಕೆಯಾಗಿರುವುದು ವಿಶೇಷ

ಈ ಮನೆಯನ್ನ 2 ಎಕರೆ ಪ್ರದೇಶದಲ್ಲಿ ಕರಿ ಕಲ್ಲಿನಿಂದ ಕಟ್ಟಲಾಗಿದ್ದು, ಕಟ್ಟಿಗೆಯ ವಾಸ್ತುಶಿಲ್ಪಗಳನ್ನು ಬಳಸಲಾಗಿದೆ

48 ಕೋಣೆಗಳು ಹಾಗೂ 108 ಬಾಗಿಲುಗಳಿದ್ದು, ಪ್ರತಿ ಕೋಣೆಯೊಳಗೊಂದು ಸಣ್ಣ ಬಾಗಿಲುಗಳನ್ನು ಅಳವಡಿಸಲಾಗಿದೆ

ಮನೆಯ ನೆಲಮಹಡಿಯ ಸುರಂಗ ಮಾರ್ಗ ಮನೆಯಿಂದ 500 ಮೀಟರ್ ದೂರದಲ್ಲಿರುವ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುತ್ತದೆ

ಯಾವ ಕೋಣೆಯಲ್ಲಿ ಹೋದ್ರೂ ಮರಳಿ ಆ ಕೋಣೆಗೆ ಬರುವಂತೆ ಪ್ಲಾನ್ ಮಾಡಿ ಮನೆಯನ್ನ ಕಟ್ಟಲಾಗಿದೆ

ಹಿಂದಿನ ಕಾಲದಲ್ಲಿ ಧರ್ಮರಾಜ್ ಸಾಹು ಅವರ ಪೂರ್ವಜರು ಆ ಸುರಂಗ ಮಾರ್ಗದಿಂದಲೇ ದೇವಸ್ಥಾನಕ್ಕೆ ದರ್ಶನಕ್ಕೆ ಹೋಗುತ್ತಿದ್ದರಂತೆ