ಬೆಂಗಳೂರಲ್ಲಿ ಕಡಿಮೆ ಬೆಲೆಯಲ್ಲಿ ಭರ್ಜರಿ ಮೀನೂಟ! 100 ಕ್ಯಾಂಟೀನ್ ಆರಂಭ

ಮೀನುಪ್ರಿಯರಿಗೆ ಭರ್ಜರಿ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.

ಸೂಪ್, ಫಿಶ್ ಕರಿ, ಅನ್ನ ಮತ್ತು ಉಪ್ಪಿನಕಾಯಿ ಸ್ಟಾರ್ಟರ್ಗಳು ಸಹ ಈ ವಿಶೇಷ ಮೀನೂಟದಲ್ಲಿರಲಿದೆ

ಮೀನುಗಾರಿಕಾ ಇಲಾಖೆಯ ಕ್ಯಾಂಟೀನ್ಗಳಲ್ಲಿ ದೊರೆಯಲಿರುವ ಈ ಮೀನೂಟದ ಬೆಲೆ 100 ರೂ. ಆಗಿರಲಿದೆ. 

ಕರಾವಳಿಯ ರುಚಿ ರುಚಿ ಮೀನುಗಳ ಖಾದ್ಯಗಳು ಬೆಂಗಳೂರಿನಲ್ಲೇ ಇನ್ನಷ್ಟು ಸಲೀಸಾಗಿ ದೊರೆಯಲಿವೆ.

ಈ ಕ್ಯಾಂಟೀನ್ಗಳಲ್ಲಿ ಅಪ್ಪಟ ಮೀನೂಟ ದೊರೆಯಲಿದ್ದು ಒಟ್ಟು 24 ಬಗೆಯ ಭಕ್ಷ್ಯಗಳು ಈ ಊಟದಲ್ಲಿರಲಿವೆ. 

ಬೆಂಗಳೂರಿನ 100 ಸ್ಥಳಗಳಲ್ಲಿ ಮೊದಲು ಇಂತಹ ಮೀನು ಊಟದ ಕ್ಯಾಂಟೀನ್ಗಳನ್ನು ಆರಂಭಿಸಲು ನಿರ್ಧರಿಸಿದೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ರೆಸ್ಟೋರೆಂಟ್ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.

ಬಳ್ಳಾರಿ, ಶಿವಮೊಗ್ಗ ಮತ್ತು ಮಂಗಳೂರು ಮುಂತಾದೆಡೆ ಮತ್ಯ್ಸ ದರ್ಶಿನಿ ರೆಸ್ಟೋರೆಂಟ್ಗಳು ಕಾರ್ಯನಿರ್ವಹಿಸುತ್ತಿವೆ

100 ಮೀನು ಕ್ಯಾಂಟೀನ್ಗಳು ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಶೀಘ್ರದಲ್ಲೇ ಆರಂಭವಾಗೋದು ಪಕ್ಕಾ ಆಗಿದೆ.