ಭಾರತದ ಅತ್ಯಂತ ಹೆಚ್ಚು ಟ್ರಾಫಿಕ್, ಜನರಿರುವ ನಗರಗಳಲ್ಲಿ ಬೆಂಗಳೂರು ಒಂದಾಗಿದೆ
ಸಿಲ್ಕ್ ಬೋರ್ಡ್ ಜಂಕ್ಷನ್ ಬೆಂಗಳೂರಿನ ಅತ್ಯಂತ ಹೆಚ್ಚು ಟ್ರಾಫಿಕ್ ಇರುವ ಸ್ಥಳ
ಮಾರತಹಳ್ಳಿಯಲ್ಲೂ ಇತ್ತೀಚೆಗೆ ಹೆಚ್ಚು ವಾಹನಗಳು ಓಡಾಡುತ್ತವೆ. ಇದರಿಂದ ಇಲ್ಲಿ ಓಡಾಡುವುದು ಸ್ವಲ್ಪ ಕಷ್ಟ
ಮೇಖ್ರಿ ಸರ್ಕಲ್ನಲ್ಲಿ ಜಯಮಹಲ್ ಪ್ಯಾಲೇಸ್ ಮತ್ತು ಸ್ಯಾಂಕಿ ಟ್ಯಾಂಕ್ ರೋಡ್ನಿಂದ ಬರುವ ಪ್ರಯಾಣಿಕರಿಗೆ ಟ್ರಾಫಿಕ್ ಸಮಸ್ಯೆಯಾಗುತ್ತದೆ
ಕೆ ಆರ್ ಪುರಂ ತೂಗು ಸೇತುವೆ ರಸ್ತೆ ಹಳೆಯ ಮದ್ರಾಸ್ ಮತ್ತು ಬೇರೆ ಪ್ರದೇಶಗಳಿಗೆ ಸಂಪರ್ಕಿಸುವುದರಿಂದ ಇಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತದೆ.
ಮೈಸೂರು ರಸ್ತೆ ಜಂಕ್ಷನ್ ಬೆಂಗಳೂರಿನ ಮಧ್ಯ ಭಾಗದಲ್ಲಿರುವುದರಿಂದ ಹಲವು ಮಾರ್ಗಗಳಿಗೆ ಇದು ಸಂಪರ್ಕಿಸುತ್ತದೆ. ಆದ್ದರಿಂದ ಇಲ್ಲಿಯೂ ಜನರು ಹೆಚ್ಚಿನ ಟ್ರಾಫಿಕ್ ಸಮಸ್ಯೆ ಎದುರಿಸ್ತಾರೆ.
ಟಿನ್ ಫ್ಯಾಕ್ಟರಿ ಜಂಕ್ಷನ್ ಹಳೆಯ ಮದ್ರಾಸ್ ರಸ್ತೆ, ಕೆ ಆರ್ ಪುರಂ ರಸ್ತೆಗಳ ಸಂಪರ್ಕ ಹೊಂದಿದೆ
ಇನ್ನು ಈ ರಸ್ತೆಗಳಲ್ಲಿ ವಾಹನಗಳನ್ನು ನಿರ್ವಹಿಸಲು ಸಮಸ್ಯೆಯಿರುವುದರಿಂದ ಇಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಹೆಬ್ಬಾಳ ಫ್ಲೈ ಓವರ್ ಸಹ ಬೆಂಗಳೂರಿನ ಉತ್ತರ ಭಾಗದಲ್ಲಿ ಪ್ರಮುಖವಾಗಿ ಹೆಚ್ಚು ಟ್ರಾಫಿಕ್ ಸಮಸ್ಯೆ ಹೊಂದಿರುವ ರಸ್ತೆಯಾಗಿದೆ.
ನಗರದಲ್ಲಿನ ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಲು ಅಥವಾ ಬೇಗ ಹೋಗಬೇಕಂದ್ರೆ ಜನರು ಬೇರೆ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು