ಕುಂಬ್ಳೆ ಗೋಪಾಲಕೃಷ್ಣ ದೇವಸ್ಥಾನ

ಕರಾವಳಿಯ ಭಾಗದಲ್ಲಿ ಸಿಡಿಮದ್ದು ಇಲ್ಲದೇ ಜಾತ್ರೆ, ಉತ್ಸವಗಳೇ ನಡೆಯದು. 

ಗಡಿನಾಡು ಕರ್ನಾಟಕ ಕೇರಳದ ಕುಂಬ್ಳೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಉತ್ಸವದಲ್ಲಿ ಸಿಡಿಮದ್ದುಗಳ ಆಕರ್ಷಕ ಹೂರಣವೇ ಕಂಡು ಬರುತ್ತವೆ.

ಸಿಡಿಮದ್ದುಗಳ ಆಕರ್ಷಕ ಪ್ರದರ್ಶನವಂತೂ ಜನರನ್ನ ಪಟಾಕಿಗಳ ಬೆಳಕಿನಲ್ಲಿ ತೇಲಾಡುವಂತೆ ಮಾಡುತ್ತದೆ.

 ಜನರಂತೂ ತಮ್ಮ ತಮ್ಮ ಮೊಬೈಲ್​ಗಳಲ್ಲಿ ಈ ದೃಶ್ಯಗಳನ್ನ ಸೆರೆ ಹಿಡಿಯೋದಕ್ಕಾಗಿಯೇ ಕಾಯುತ್ತಿರುತ್ತಾರೆ.

ಇತಿಹಾಸ ಪ್ರಸಿದ್ಧವಾದ ಕುಂಬಳೆ ಕಣಿಪುರ ಗೋಪಾಲಕೃಷ್ಣ ದೇವಸ್ಥಾನವು ಕುಂಬಳೆ ಸೀಮೆಯ ಪ್ರಮುಖ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. 

ಪ್ರತೀ ವರ್ಷ ಜನವರಿ ತಿಂಗಳಿನಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು, ಕರ್ನಾಟಕ ಹಾಗು ಕೇರಳದ ಲಕ್ಷಾಂತರ ಸಂಖ್ಯೆಯ ಭಕ್ತರು ಈ ಜಾತ್ರೋತ್ಸವದಂದು ಕುಂಬಳೆಯಲ್ಲಿ ಸೇರುತ್ತಾರೆ.

ಜಾತ್ರೋತ್ಸವದ ಕೊನೆಯ ದಿನ ನಡೆಯುವ ದೇವರ ಬಲಿ ಉತ್ಸವ ಮತ್ತು ಸಿಡಿಮದ್ದು ಪ್ರದರ್ಶನ ಅತ್ಯಂತ ಆಕರ್ಷಣೀಯವಾಗಿರುತ್ತದೆ.

 ಸಿಡಿಮದ್ದು ಪ್ರದರ್ಶನ ನೋಡಲೆಂದೇ ಲಕ್ಷಾಂತರ ಸಂಖ್ಯೆಯ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಕ್ಷೇತ್ರದ ರಾಜಾಂಗಣದಲ್ಲಿ ಗೋಪಾಲಕೃಷ್ಣ ದೇವರ ಬಲಿ ಉತ್ಸವ ನಡೆದ ಬಳಿಕ ಉತ್ಸವ ಮೂರ್ತಿಯನ್ನು ಉತ್ಸವ ಕಟ್ಟೆಯಲ್ಲಿ ಇಟ್ಟು ಪೂಜಿಸಲಾಗುತ್ತೆ.