ಸ್ಟಾರ್ ಕಿಡ್ ಆಯ್ರಾಗೆ ಇದ್ದಾರೆ ಸಿಕ್ಕಾಪಟ್ಟೆ ಫ್ಯಾನ್
ರಾಕಿಂಗ್ ಸ್ಟಾರ್ ಯಶ್, ರಾಧಿಕಾಗಿಂತ ಈಗ ಅವರ ಮಗಳು ಆಯ್ರಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾಳೆ
ಆಯ್ರಾ ಫೋಟೊಗೆ ಸಾಮಾಜಿಕ ಜಾಲತಾಣದಲ್ಲಿ ಈಗ ಎಲ್ಲಿಲ್ಲದ ಬೇಡಿಕೆ
ಈಗಾಗಲೇ ಅನೇಕ ಅಭಿಮಾನಿಗಳನ್ನು ಆಯ್ರಾ ಹೊಂದಿದ್ದು, ಆಕೆ ಹೆಸರಿನಲ್ಲಿ ಅನೇಕ ಅಭಿಮಾನಿ ಪೇಜ್ಗಳಿವೆ
ಸ್ಟಾರ್ ಕಿಡ್ ಆಗಿರುವ ಆಯ್ರಾಳ ಫೋಟೋಗಳನ್ನು ಅಮ್ಮ ರಾಧಿಕಾ ಕೂಡ ಹಂಚಿಕೊಳ್ಳುತ್ತಿರುತ್ತಾರೆ.
ಆಯ್ರಾ ಕೂಡ ಅಮ್ಮ ರಾಧಿಕಾ- ಅಪ್ಪ ಯಶ್ ಜೊತೆಗೆ ಫೋಟೋಗಳಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಾಳೆ.
ಆಯ್ರಾಗೆ ಈಗಾಗಲೇ ಮೂರು ವರ್ಷ ಆಗಿದ್ದು, ಇತ್ತೀಚೆಗಷ್ಟೇ ಆಕೆ ಹುಟ್ಟು ಹಬ್ಬ ಆಚರಿಸಿದ್ದಾಳೆ.
ತಮ್ಮ ಯಥರ್ವ್ ಜೊತೆಗಿನ ಆಯ್ರಾ ಮುದ್ದು ಮುದ್ದು ಫೋಟೋಗಳು ಸಾಕಷ್ಟು ಮೆಚ್ಚುಗೆ ಗಳಿಸಿದೆ
ಸಿಕ್ಕಾಪಟ್ಟೆ ಕ್ಯೂಟ್ ಆಗಿರುವ ಆಯ್ರಾ ಫೋಟೋಗಾಗಿ ಅಭಿಮಾನಿಗಳು ಕಾಯುತ್ತಾರೆ.
ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದಿರುವ ರಾಧಿಕಾ ಪಂಡಿತ್ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.