'ಐರಾ' ಹೆಸರಲ್ಲಿ Yash ಪ್ರೊಡಕ್ಷನ್ ಹೌಸ್

ಯಶ್ ಕೆಜಿಎಫ್ ಸಿನಿಮಾ ಮೂಲಕ ಇಡೀ ಚಿತ್ರರಂಗವೇ ತಿರುಗಿನೋಡುವಂತೆ ಮಾಡಿದ್ದಾರೆ

ಕೆಜಿಎಫ್ ಭರ್ಜರಿ ಸಕ್ಸಸ್ ಬಳಿಕ ಯಶ್ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಇದೆ

ಕನ್ನಡಿಗರು ಮಾತ್ರವಲ್ಲದೆ ಇಡೀ ದೇಶವೇ ಯಶ್ ಅವರ ಮುಂದಿನ ಸಿನಿಮಾ ನಿರೀಕ್ಷೆಯಲ್ಲಿದೆ

ಇದೀಗ ರಾಕಿಂಗ್ ಸ್ಟಾರ್ ಯಶ್ ಅಡ್ಡದಿಂದ ಮತ್ತೊಂದು ಹೊಸ ಸುದ್ದಿ ಕೇಳಿಬರುತ್ತಿದೆ

ಯಶ್ ಅವರು ಮಗಳು ಐರಾ ಹೆಸರಿನಲ್ಲಿ ಪ್ರೊಡಕ್ಷನ್ ಸಂಸ್ಥೆ ನಿರ್ಮಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ

ಐರಾ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಮಾಡಿ, ಮೊದಲ ಸಿನಿಮಾವಾಗಿ ಯಶ್ ಅವರೇ ನಟಿಸಲಿದ್ದಾರಂತೆ

ಯಶ್ ಮುಂದಿನ ಚಿತ್ರಕ್ಕೆ ಅವರ ಮಗಳೇ ನಿರ್ಮಾಪಕಿ ಎನ್ನಲಾಗುತ್ತಿದೆ

ಈಗಾಗಲೇ ನಿರ್ಮಾಣ ಸಂಸ್ಥೆಗೆ ಬೇಕಿರುವ ಚಟುವಟಿಕೆಗಳು ನಡೆದಿವೆ ಎಂದು ಆಪ್ತ ಮೂಲಗಳಿಂದ ಮಾಹಿತಿ ಬಂದಿದೆ

ಯಶ್ ಹುಟ್ಟುಹಬ್ಬದ ದಿನದಂದು ಸುದ್ದಿ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ