ಅಮೃತವರ್ಷಿಣಿ ಧಾರಾವಾಹಿ ಮೂಲಕ ಹೆಸರು ಪಡೆದ ನಟಿ ರಜನಿ

ಈ ಮುಗ್ಧ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುಂದರಿ ಎಂದರೆ ಅಭಿಮಾನಿಗಳಿಗೆ ಈಗಲೂ ಇಷ್ಟ. 

ತುಮಕೂರು ಮೂಲದ ರಜನಿ ಅದ್ಬುತ ಗಾಯಕಿ ಕೂಡ ಹೌದು. 

2012ರ ಅಮೃತವರ್ಷಿಣಿ ಧಾರಾವಾಹಿ ಅವರಿಗೆ ಬ್ರೇಕ್ ನೀಡಿದ ಸೀರಿಯಲ್ 

ಗಾಯಕಿ ಮಾತ್ರವಲ್ಲದೇ ರಜನಿ ಉತ್ತಮ ಡ್ಯಾನ್ಸರ್ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ

ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದ ರಜನಿ, ಜನರ ಮನ ಸೆಳೆದಿದ್ದರು. 

ಆದರೆ ರಜನಿ ಸದ್ಯ ಹೆಚ್ಚಾಗಿ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಆದರೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಇದ್ದು, ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ಧಾರೆ

ಸದ್ಯ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದು, ಬೇರೆ ಯಾವುದೇ ಧಾರಾವಾಹಿ ಒಪ್ಪಿಕೊಂಡಿಲ್ಲ. 

ಆದರೆ ರಜನಿಗೆ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುವ ಆಸೆ ಇದ್ದು, ಅಳುಮುಂಜಿ ಪಾತ್ರಗಳು ಬೇಡ ಎನ್ನುತ್ತಿದ್ದಾರೆ.