ನಟಿ ಸಮಂತಾ ಸೌಂದರ್ಯದ ಖನಿ ಅನ್ನೋದ್ರಲ್ಲಿ ಎರಡು ಮಾತಿಲ್ಲ
ಆಕೆಯ ತ್ವಚೆ, ಸ್ಟೈಲ್ ಸೆನ್ಸ್, ಫಾಲೊ ಮಾಡುವ ಹುಡುಗಿಯರ ಸಂಖ್ಯೆ ದೊಡ್ಡದಿದೆ
ಮೊದಲು ಮಾಂಸಾಹಾರಿಯಾಗಿದ್ದ ಸಮಂತಾ ಈಗ ಸಂಪೂರ್ಣ ಸಸ್ಯಾಹಾರಿ
ಸಮಂತಾ ಸೌಂದರ್ಯಕ್ಕೆ ಮುಖ್ಯ ಕಾರಣ ಅವರು ಸೇವಿಸುವ ಆಹಾರವೇ ಅಂತೆ
ಎಷ್ಟೇ ಬ್ಯುಸಿಯಾಗಿದ್ರೂ ಯೋಗ, ವರ್ಕೌಟ್ ಸೀರಿಯಸ್ ಆಗಿ ಮಾಡ್ತಾರೆ ಸ್ಯಾಮ್
ಇದ್ರಿಂದ ದೇಹ ದಣಿದರೂ ಮನಸ್ಸು ಫ್ರೆಶ್ ಇರುತ್ತೆ, ಚರ್ಮ ಶೈನ್ ಆಗುತ್ತಂತೆ
ಮನಸ್ಸು ಖುಷಿಯಾಗಿದ್ದಾಗ ನಮ್ಮ ಬಗ್ಗೆ ಆತ್ಮವಿಶ್ವಾಸ ಮೂಡುತ್ತದೆ, ಅದೇ ಮುಖದ ಕಾಣುತ್ತದೆ
ನೀರು ಕೂಡಾ ಸಮಂತಾ ಸುಂದರ ಮುಖದ ಸೀಕ್ರೆಟ್ ಅಂತೆ, ದಿನಕ್ಕೆ ಕನಿಷ್ಟ 3ಲೀ ನೀರು ಕುಡಿಯುತ್ತಾರಂತೆ
ಸಮಂತಾಗೆ ಕಾಸ್ಮೆಟಿಕ್ಸ್ ಅಂದ್ರೆ ಬಹಳ ಇಷ್ಟವಂತೆ, ಬ್ಯಾಗ್ ತುಂಬಾ ಮೇಕಪ್ ಸಾಮಗ್ರಿ ಯಾವಾಗ್ಲೂ ಇರುತ್ತಂತೆ
ಎಲ್ಲಕ್ಕಿಂತ ಸರಳತೆಯೇ ತನ್ನ ಸೌಂದರ್ಯದ ಗುಟ್ಟು ಎಂದಿದ್ದಾರೆ ಸಮಂತಾ