1998ರಲ್ಲಿ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕಿದ ಚೆಲುವೆಯೇ ಮಲೈಕಾ ಅರೋರಾ. ಅಂದಿನ ಮಲೈಕಾ ಇಂದೂ ಬದಲಾಗಿಲ್ಲ. 

ಇಂದಿಗೂ ಅದೇ ರೂಪವನ್ನು ತನ್ನಲ್ಲಿಯೇ ಉಳಿಸಿಕೊಂಡಿರುವ ಮಲೈಕಾ ಈಗ ಮತ್ತಷ್ಟು ಮಾದಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

1998ರಲ್ಲಿ ನಟ ಅರ್ಬಾಜ್ ಖಾನ್ ಅವರನ್ನು ಮದುವೆಯಾದ ಮಲೈಕಾ 2017ರವರೆಗಗೂ ಪತಿ ಜೊತೆ ಜೀವನ ನಡೆಸಿದರು. 

 

ಈಗ ಖಾಸಗಿ ವಾಹಿನಿಯ ಡ್ಯಾನ್ಸ್ ಶೋಗಳಲ್ಲಿ ಜಡ್ಜ್ ಆಗಿದ್ದಾರೆ.

2017ರಲ್ಲಿ ಅರ್ಬಾಜ್ ಖಾನ್ ನಿಂದ ವಿಚ್ಛೇದನ ಪಡೆದ ಮಲೈಕಾ, ಮಗನೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಸದ್ಯ ತಮಗಿಂತ 12 ವರ್ಷ ಚಿಕ್ಕವನಾದ ಅರ್ಜುನ್ ಕಪೂರ್ ಜೊತೆ ಮಲೈಕಾ ರಿಲೇಶನ್ ಶಿಪ್ ನಲ್ಲಿದ್ದಾರೆ. 

ಮೊದಲಿಗೆ ಮಾಧ್ಯಮಗಳ ಕ್ಯಾಮೆರಾ ಕಣ್ಣು ತಪ್ಪಿಸಿ ಮಲೈಕಾ ಮತ್ತು ಅರ್ಜುನ್ ಓಡಾಡುತ್ತಿದ್ರು. 

ಈಗ ನಿರ್ಭೀತಿಯಿಂದ ಅರ್ಜುನ್ ಮತ್ತು ಮಲೈಕಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. 

ಸೋಶಿಯಲ್ ಮೀಡಿಯಾದಲ್ಲಿ ಜೊತೆಯಾಗಿರುವ ಫೋಟೋ ಮತ್ತು ವಿಡಿಯೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಸೋನಿಯಲ್ಲಿ ಡ್ಯಾನ್ಸಿಂಗ್ ಶೋ ಮತ್ತು  ಎಂಟಿವಿಯಲ್ಲಿ ಜಡ್ಜ್ ಆಗಿದ್ದಾರೆ. ಆಗಾಗ ಟಿಕ್ ಟಾಕ್ ವಿಡಿಯೋ ಸಹ ಮಾಡ್ತಿರ್ತಾರೆ.