Prathama Prasad ನಟಿ ಮಾತ್ರ ಅಲ್ಲ ಡ್ಯಾನ್ಸರ್ ಕೂಡ 

ದೇವಿ ಪಾತ್ರ ಎಂದ ತಕ್ಷಣ ನೆನಪಾಗುವುದು ನಟಿ ಪ್ರಥಮಾ ಪ್ರಸಾದ್ ಮುಖ

ಪರಕಾಯ ಪ್ರವೇಶ ಮಾಡಿ ಪಾತ್ರಗಳಿಗೆ ಜೀವ ತುಂಬುವ ನಟಿಯರಲ್ಲಿ ಇವರೂ ಒಬ್ಬರು

ಧಾರಾವಾಹಿ, ಸಿನಿಮಾಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ

ಆದರೆ ಇವರು ನಟಿ ಮಾತ್ರ ಅಲ್ಲ ಡ್ಯಾನ್ಸರ್ ಕೂಡ ಹೌದು

ಅದ್ಭುತ ಕಥಕ್ ನೃತ್ಯಗಾರ್ತಿಯಾಗಿರುವ ನಟಿ, ವಿಧೂಷಿ ಪ್ರಥಮಾ ಪ್ರಸಾದ್

ನನಗೆ ನೃತ್ಯ ಎಂದರೆ ಬಹಳ ಇಷ್ಟ, ನಾನು ಮೊದಲು ಡ್ಯಾನ್ಸರ್ ಎನ್ನುತ್ತಾರೆ ಇವರು

ಬೊಂಬೆಯಾಟವಯ್ಯಾ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ

ಸುಮಾರು 10 ವರ್ಷಗಳಿಂದ ವಿಭಿನ್ನ ಪಾತ್ರಗಳನ್ನು ಮಾಡುತ್ತಿರುವ ಇವರಿಗೆ ಹೆಚ್ಚು ಹೆಸರು ನೀಡಿದ್ದು ದೇವಿಯ ಪಾತ್ರಗಳು

ಬ್ರಹ್ಮಗಂಟು, ಅಮ್ನೋರು, ದೇವಿ, ಮಹಾದೇವಿ ಹೀಗೆ ಅನೇಕ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ

ಸಹಜ ಅಭಿನಯಕ್ಕೆ ಹೆಸರಾಗಿರುವ ನಟಿ ಸದ್ಯ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಅಲ್ಲದೇ ಸಿನಿಮಾಗಳಲ್ಲಿ ಸಹ ನಟಿಸಿದ್ದು, ಸಿನಿಮಾಗಳು ಬಿಡುಗಡೆಯಾಗಬೇಕಿದೆ.