ನಿರೂಪಕಿಯಾಗಿದ್ದ ಅಶ್ವಿನಿ ನಟಿಯಾಗಿ ಜನರ ಮನ ಗೆದ್ದಿರುವುದರಲ್ಲಿ ಯಾವುದೇ ಅನುಮಾನವಿಲ್ಲ

ಬಹಳಷ್ಟು ಆಫರ್ ಬಂದರೂ ಸಹ ನಿರಾಕರಿಸಿದ್ದ ನಟಿಯ ಮೊದಲ ಸೀರಿಯಲ್ ಅನುರಾಗ ಸಂಗಮ

ಉದಯ ಮ್ಯೂಸಿಕ್ನಲ್ಲಿ ನಿರೂಪಣೆ ಮಾಡುವ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟವರು ಈ ನಟಿ 

ಮೂಲತಃ ಮೈಸೂರಿನವರಾದ ಅಶ್ವಿನಿ, ಡಿಗ್ರಿ ಮುಗಿದ ನಂತರ ಆ್ಯಂಕರ್ ಆಗಿ ಕೆಲಸಕ್ಕೆ ಸೇರಿದ್ದರು

ಕಾಲೇಜು ದಿನಗಳಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಅವರಿಗೆ ನಟನೆಯ ಮೇಲೆ ಆಸಕ್ತಿ ಇತ್ತು. 

ಅನುರಾಗ ಸಂಗಮದ ನಂತರ ಕುಲವಧು ಧಾರಾವಾಹಿಯಲ್ಲಿ ಸಹ ನಟಿಸಿದ್ದರು. 

ಈ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಬಳಿ ಸೈ ಎನಿಸಿಕೊಂಡಿದ್ದರು.

ನಂತರ ಗಿರಿಜಾ ಕಲ್ಯಾಣ ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ಪಡೆದರು.

ಸಹನಟಿಯಾಗಿ ನಟಿಸುತ್ತಿದ್ದ ಅಶ್ವಿನಿ ಮುದ್ದುಲಕ್ಷ್ಮಿ ಧಾರಾವಾಹಿಯ ಮೂಲಕ ನಾಯಕಿಯಾದರು.

ಇದೀಗ ಅಶ್ವಿನಿ ಕಿರುತೆರೆ ಲೋಕದಲ್ಲಿ ಅದ್ಭುತ ನಟಿ ಎನಿಸಿಕೊಂಡಿದ್ದಾರೆ.