Sini Shetty ಬಗ್ಗೆ ನಿಮಗೆಷ್ಟು ಗೊತ್ತು? 

ಸಿನಿ ಶೆಟ್ಟಿ, ಸದ್ಯ ಎಲ್ಲೆಡೆ ಟ್ರೆಂಡಿಂಗ್ ಇರುವ ಹೆಸರು. ಮಿಸ್ ಇಂಡಿಯಾ 2022ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಸುಂದರಿ ಮೂಲತಃ ಕರ್ನಾಟಕದ ಉಡುಪಿಯವರು, ಆದರೆ ಇರುವುದು ಮುಂಬೈನಲ್ಲಿ

ಅಕೌಂಟಿಂಗ್ ಹಾಗೂ ಫೈನಾನ್ಸ್ನಲ್ಲಿ ಮಾಸ್ಟರ್ಸ್ ಪದವಿ ಪಡೆದಿದ್ದು ಈಗ ಸಿಎಫ್ ಎ ಕೋರ್ಸ್ ಮಾಡುತ್ತಿದ್ದಾರೆ. 

ಸಿನಿ ಶೆಟ್ಟಿ ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದು, ಅವರಿಗೆ ಬೇರೆ ಪ್ರಕಾರದ ಡ್ಯಾನ್ಸ್ಗಳು ಸಹ ಬಹಳ ಇಷ್ಟವಂತೆ

ಅವರು ನಾಲ್ಕನೇ ವಯಸ್ಸಿನಲ್ಲಿ ನೃತ್ಯ ಕಲಿಯಲು ಪ್ರಾರಂಭಿಸಿ, ಹದಿನಾಲ್ಕನೆಯ ವಯಸ್ಸಿನಲ್ಲಿ ಭರತನಾಟ್ಯದಲ್ಲಿ ತಮ್ಮ ಅರಂಗಾಟಮ್ ಪೂರ್ಣಗೊಳಿಸಿದ್ದಾರೆ.

ಸಿನಿ ಶೆಟ್ಟಿ ಅವರ ಗೆಲುವು ಕರ್ನಾಟಕ ರಾಜ್ಯಕ್ಕೆ ಮತ್ತೊಂದು ಕೀರ್ತಿ ರತ್ನವನ್ನು ಸೇರಿಸಿದೆ,

ಸಿನಿ ಶೆಟ್ಟಿ ನೃತ್ಯದ ಹೊರತಾಗಿ ಯೋಗ ಕೂಡ ಮಾಡುತ್ತಾರೆ, ಅದು ಅವರ ಫೇವರೇಟ್ ಎನ್ನುತ್ತಾರೆ ಸುಂದರಿ. 

ತನ್ನ ಆಹಾರ ಕ್ರಮದ ಬಗ್ಗೆ ಸಂಪೂರ್ಣ ಗಮನಹರಿಸುತ್ತಾರೆ. ತಾವೇ ಖುದ್ದು ಅಡುಗೆ ಮಾಡಲು ಇಷ್ಟಪಡುತ್ತಾರಂತೆ.

ಈಗ 71 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ