ದೊರೆಸಾನಿ ಸೀರಿಯಲ್ನ ನಟಿಯ ತಂಗಿ ಗೌತಮಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಪ್ರತಿಮಾ ಸದ್ಯ ಎಲ್ಲರ ಮನೆ ಮಾತಾಗಿದ್ದಾರೆ.
ಗೌತಮಿ ಪಾತ್ರದಲ್ಲಿ ನಟಿಸುತ್ತಿರುವ ಪ್ರತಿಮಾ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಾರೆ.
ಆಲ್ಬಮ್ ಸಾಂಗ್, ಕಿರುಚಿತ್ರಗಳಲ್ಲಿ ನಟಿಸಿದ್ದ ಪ್ರತಿಮಾ ದೊರೆಸಾನಿ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ.
ಪ್ರತಿಮಾ ಅವರ ಗೌತಮಿ ಪಾತ್ರಕ್ಕೆ ಸದ್ಯ ಎಲ್ಲರೂ ಮೆಚ್ಚುಗೆಯ ಮಾತನಾಡುತ್ತಿದ್ದಾರೆ.
ಪ್ರತಿಮಾ ಪಿಯುಸಿ ಆಗಿರುವುದರಿಂದ ಅವರಿಗೆ ಅನೇಕರು ಕುಳ್ಳಿ ಎಂದು ಹೇಳುತ್ತಾರಂತೆ.
ಅಲ್ಲದೇ ಅವರನ್ನು ನೋಡಿದವರು ನೀನಿನ್ನೂ 7ನೇ ತರಗತಿ ಎಂದು ಹೇಳಿದವರೂ ಇದ್ದಾರಂತೆ.
ಇದಕ್ಕಾಗಿ ಪ್ರತಿಮಾ ಎತ್ತರವಾಗಲು ಸ್ವಿಮಿಂಗ್ ಮಾಡುತ್ತಿರುವದಾಗಿ ಹೇಳಿಕೊಂಡಿದ್ದಾರೆ.
ದೊಡ್ಡವಳಾದ ಮೇಲೆ ಹೀರೋಯಿನ್ ಆಗಬೇಕೆಂಬ ಕನಸನ್ನು ಪ್ರತಿಮಾ ಹೊಂದಿದ್ದಾಳೆ.
ಜನರ ಪ್ರೀತಿ ತುಂಬಾ ಸಂತಸ ತಂದಿದೆ. ಎಲ್ಲರ ಹಾರೈಕೆ ಹೀಗೆ ಇರಲಿ ಎಂದು ಕೇಳಿಕೊಂಡಿದ್ದಾರೆ.
ಪ್ರತಿಮಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದು, ರೀಲ್ಸ್ ಗಳನ್ನು ಆಗ್ಗಾಗ್ಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.