ದೀಪಿಕಾ –ರಣವೀರ್ ಜೋಡಿಯ ಮೋಡಿ 

ನಾವು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರನ್ನು ಹಲವು ಬಾರಿ ಒಟ್ಟಿಗೆ ನೋಡಿದ್ದೇವೆ 

ಆದರೆ ಅವರಿಬ್ಬರನ್ನು ರ್ಯಾಂಪ್ ವಾಕ್ ಮೇಲೆ ನೋಡುವುದು ಕಣ್ಣಿಗೆ ಹಬ್ಬ ಎನ್ನಬಹುದು

ಮನೀಶ್ ಮಲ್ಹೋತ್ರಾ ಅವರ ಮಿಜ್ವಾನ್ ಸಂಗ್ರಹದ 10 ವರ್ಷದ ಸಕ್ಸಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 

ಈ ಜೋಡಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದು, ನೋಡುಗರು ಇವರನ್ನು ನೋಡುತ್ತಲೇ ಇದ್ದರು

ದೀಪಿಕಾ ಬ್ಲಷ್ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿದ್ದಾರೆ

 ಅವರ ಹೇರ್ ಸ್ಟೈಲ್, ಸ್ಮೋಕಿ ಐ ಮೇಕಪ್ ಈ ಲೆಹೆಂಗಾಕ್ಕೆ ಆಧುನಿಕ ಸ್ಪರ್ಶ ನೀಡಿತ್ತು

 ರಣವೀರ್ ಸಿಂಗ್ ಬಾಲಿವುಡ್ನ ಸ್ಟೈಲಿಶ್ ಕಿಂಗ್ ಎಂದು ಸಾಬೀತು ಮಾಡಿದ್ದಾರೆ. 

ಸಾಂಪ್ರದಾಯಿಕವಾಗಿ ಕಸೂತಿ ಮಾಡಿದ ಕಪ್ಪು ಪ್ಯಾಂಟ್ ಮತ್ತು ಖುರ್ತಾ ಧರಿಸಿ ಮಿಂಚಿದ್ದಾರೆ

 ಇಬ್ಬರ ರೊಮ್ಯಾಂಟಿಕ್ ರ್ಯಾಂಪ್ ವಾಕ್ ನ  ನೋಡಲು ಎರಡು ಕಣ್ಣು ಸಾಲದು ಎನ್ನುವಂತಿತ್ತು