ರಾಜಮೌಳಿ ನಿರ್ದೇಶನದ RRR ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡಿದೆ

ಈ ಸಿನಿಮಾ ವಿಶ್ವ ಮಟ್ಟದಲ್ಲಿ 970 ಕೋಟಿ ಕಲೆಕ್ಷನ್​ ಮಾಡಿದೆ

ಆರ್​ಆರ್​ಆರ್​​ ಸಿನಿಮಾ ಶೀಘ್ರವೇ 1000 ಕೋಟಿ ಕ್ಲಬ್​ ಸೇರಿಕೊಳ್ಳಲಿದೆ

ಈ ಸಿನಿಮಾದಲ್ಲಿ ಬುಡಕಟ್ಟು ಜನಾಂಗದ ಮಲ್ಲಿ ಪಾತ್ರ ಎಲ್ಲರ ಗಮನ ಸೆಳೆದಿತ್ತು

ಮಲ್ಲಿ ಪಾತ್ರದ ತಾಯಿ ಲೋಕಿ ಪಾತ್ರಕ್ಕೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು

ಈ ಲೋಕಿ ಪಾತ್ರದಲ್ಲಿ ಕಾಣಿಸಿಕೊಂಡವರ ಹೆಸರು ಅಹ್ಮರೀಮ್​ ಅಂಜುಮ್​

ಇವರು ಮೂಲತಃ ಕೋಲ್ಕತ್ತಾದವರು, ಈ ಪಾತ್ರದಿಂದ ಸಾಕಷ್ಟು ಖ್ಯಾತಿ ಸಿಕ್ಕಿದೆ

ಆಡಿಷನ್​ ಕೊಟ್ಟು 2ವರ್ಷದ ಬಳಿಕ ಅಹ್ಮರೀಮ್​ ಅವರಿಗೆ ಕರೆ ಬಂದಿತ್ತಂತೆ

ಜೂನಿಯರ್​ ಎನ್​ಟಿಆರ್​ ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿದ್ಯಂತೆ

ಈ ಸಿನಿಮಾ ಆದ ನಂತರ ಮತ್ತಷ್ಟು ಆಫರ್​ಗಳು ಹುಡುಕಿಕೊಂಡು ಬರ್ತಿದ್ಯಂತೆ