ನಟಿ ವಿದ್ಯಾಬಾಲನ್ ವಿಶೇಷವಾಗಿ ಗಮನ ಸೆಳೆಯುವುದೇ ಅವರ ಸೀರೆ ಕಲೆಕ್ಷನ್‌ಗಳಿಂದ.

ಅತ್ಯಂತ ಸಿಂಪಲ್ ಸೀರೆಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡರೂ ವಿದ್ಯಾ ಲುಕ್ ಮಾತ್ರ ರಿಚ್ ಆಗಿರುತ್ತದೆ.

ಸೀರೆಗಳಲ್ಲಿಯೂ ವಿವಿಧ ಶೈಲಿ ಬಳಸುವುದರಿಂದ ವಿದ್ಯಾ ಬಾಲನ್ ಉಡುವ ಪ್ರತಿ ಸೀರೆಯಲ್ಲಿಯೂ ವಿಶೇಷವಾಗಿ ಕಾಣಿಸುತ್ತಾರೆ.

ಸೀರೆಗೆ ತಕ್ಕಂತೆ ಆಭರಣಗಳನ್ನೂ ಬಳಸುವುದು ವಿದ್ಯಾ ಬಾಲನ್ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಸ್ವಲ್ಪ ದಪ್ಪಗಿದ್ದರೂ ಅತ್ಯಂತ ಅಚ್ಚುಕಟ್ಟಾಗಿ ಸೀರೆಯುಟ್ಟುಕೊಂಡೇ ವಿದ್ಯಾ ಬಾಲನ್ ಸಮಾರಂಭಗಳಲ್ಲಿ ಹೈಲೈಟ್ ಆಗುತ್ತಾರೆ.

ಸಿನಿಮಾ ಲೋಕದಲ್ಲಿ ಮೊದಲ 3 ವರ್ಷದ ಹಾದಿ ಹೋರಾಟದ್ದೇ ಆಗಿತ್ತು ಎನ್ನುತ್ತಾರೆ ವಿದ್ಯಾ.

ಯಾವುದೇ ರೀತಿಯ ಪಾತ್ರ ಕೊಟ್ಟರೂ ಅದಕ್ಕೆ ತನ್ನದೇ ಆದ ಛಾಪನ್ನು ಒತ್ತಿ ಬಿಡುವ ಛಾತಿ ಅಕ್ಷರಶಃ ವಿದ್ಯಾಬಾಲನ್‌ಗೆ ಇದೆ.

ಚಿತ್ರವೊಂದಕ್ಕೆ ಸುಮಾರು 7 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ವಿದ್ಯಾ ಬಾಲನ್‌ ಸೀರೆಯಲ್ಲಿಯೇ ಹೆಚ್ಚಿನ ಫೋಟೋ ಶೂಟ್‌ಗಳನ್ನೂ ಮಾಡಿದ್ದಾರೆ.

ವಿದ್ಯಾ ಬಾಲನ್ ಮಾಡಿದ ಸಿನಿಮಾಗಳು ಬಹುತೇಕ ಅವಾರ್ಡ್ ವಿನ್ನಿಂಗ್ ಸಿನಿಮಾಗಳಾಗುತ್ತವೆ ಎನ್ನುವುದೇ ವಿಶೇಷ.