ಮಲಯಾಳಂ ಸಿನಿಮಾದಲ್ಲಿ ಶಾನ್ವಿ ಶ್ರೀವಾಸ್ತವ್ 

ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ

ತೆಲುಗಿನ ರೌಡಿ ಸಿನಿಮಾಗಳ ಮೂಲಕ ಮೊದಲ ಬಾರಿ ಬಣ್ಣ ಹಚ್ಚಿದ ಶಾನ್ವಿ ಏಳು-ಬೀಳುಗಳನ್ನು ಕಂಡಿದ್ದಾರೆ. 

ಮೊದಲ ಸಿನಿಮಾ ನಂತರ ಯಾವುದೇ ಚಾನ್ಸ್ ಸಿಗದೇ ಒಂದು ವರ್ಷ ಪರದಾಡಿದ್ದರಂತೆ

ಕನ್ನಡದಲ್ಲಿ ಚಂದ್ರಲೇಖ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಈಕೆ ಟಾಪ್ ನಟಿ ಎನಿಸಿಕೊಂಡಿದ್ದಾರೆ. 

ಈ ನಟಿಗೆ ಕನ್ನಡದಲ್ಲಿ ಹೆಸರು ತಂದು ಕೊಟ್ಟ ಸಿನಿಮಾ ಯಶ್ ಅಭಿನಯದ ಮಾಸ್ಟರ್ ಪೀಸ್.

ಮೂಲತಃ ಉತ್ತರ ಪ್ರದೇಶದ ಶಾನ್ವಿ ಕನ್ನಡದ ಸಿನಿಮಾ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹೆಸರು ಪಡೆದಿದ್ದಾರೆ.

ಅವನೇ ಶ್ರೀಮನ್ನಾರಾಯಣ ಸಿನಿಮಾ ನಂತರ ಬ್ರೇಕ್ ತೆಗೆದುಕೊಂಡಿದ್ದ ನಟಿ ಮಾಲಿವುಡ್ನತ್ತ ಮುಖ ಮಾಡಿದ್ದಾರೆ.

ಅವರ ಅಭಿನಯದ ಮೊದಲ ಸಿನಿಮಾ ಮಹಾವೀರ್ಯಾರ್ ಜುಲೈ 21ರಂದು ರಿಲೀಸ್ ಆಗಿದೆ.

ಮಲಯಾಳಂ ಸ್ಟಾರ್ ನಟ ನಿವಿನ್ ಪೌಲಿ ನಟಿಸಿರುವ ಈ ಸಿನಿಮಾ ಜನರಿಗೆ ಬಹಳ ಇಷ್ಟವಾಗಿದೆ.

ಮೊದಲ ಸಿನಿಮಾದಲ್ಲಿಯೇ ಶಾನ್ವಿ ಮಲಯಾಳಂ ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ ಎನ್ನಲಾಗುತ್ತಿದೆ