ಡೇಟಿಂಗ್​​ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಕತ್ರಿನಾ

ಬಾಲಿವುಡ್​ನ ಸ್ಟಾರ್​ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಈಗಾಗಲೇ 6 ತಿಂಗಳುಗಳು ಕಳೆದಿವೆ. 

ಈ ಜೋಡಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಮದುವೆಯ ನಂತರ ಈ ಜೋಡಿ ಒಟ್ಟಿಗೆ ನಟಿಸುವುದರ ಜೊತೆ ಸಖತ್ ಚರ್ಚೆಯಾಗುತ್ತಿದೆ.

ಆದರೆ ಕೆಲ ದಿನಗಳ ಹಿಂದೆ ಕತ್ರಿನಾ ಕೈಫ್ ಅವರ ಹಳೆಯ ಸಂದರ್ಶನವೊಂದು ಸಖತ್ ವೈರಲ್ ಆಗುತ್ತಿದೆ.

ಕತ್ರಿನಾಗೆ ಸಂದರ್ಶಕರು ಕಿತ್ತು ಹೋದ ಶೂ ಧರಿಸಿದ ಹುಡುಗನ ಜೊತೆ ನೀವು ಡೇಟ್ ಮಾಡ್ತಿರಾ ಎಂದು ಕೇಳಲಾಗಿತ್ತು.

ಇದಕ್ಕೆ ಉತ್ತರಿಸಿದ ಕ್ಯಾಟ್, ಹುಡುಗ ಒಳ್ಳೆಯವನಾಗಿದ್ದರೆ ಆತ ಹೇಗಿದ್ದರೂ ಆತನ ಜೊತೆ ಡೇಟ್ ಮಾಡುವೆ ಎಂದಿದ್ದಳು.

 ಅಲ್ಲದೇ ತನ್ನ ಸಂಗಾತಿಗೆ ಮೊದಲು ಒಳ್ಳೆಯ ಸೆನ್ಸ್ ಆಫ್ ಹ್ಯೂಮರ್ ಇರಬೇಕೆಂದಿದ್ದಳು.

ಕತ್ರಿನಾ - ವಿಕ್ಕಿ ಇದೇ ವರ್ಷ ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ವಿವಾಹವಾಗಿದ್ದರು.

ವಿವಾಹವಾದ ಕೆಲ ತಿಂಗಳಲ್ಲೇ ಇವರು ತಾಯಿಯಾಗಲಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿತ್ತು.

ಕೆಲ ದಿನಗಳ ಹಿಂದೆ ಕತ್ರಿನಾ ಕೈಫ್​ಗೆ ಕೊರೋನಾ ಸೊಂಕು ತಗುಲಿತ್ತು. ಆದರೆ ಇದೀಗ ಅವರು ಚೇತರಿಸಿಕೊಂಡಿದ್ದಾರಂತೆ.