Your Page!

ನಿಮ್ಮ ಪಾಸ್‌ವರ್ಡ್ ಅನ್ನು ನಿಯಮಿತವಾಗಿ ಬದಲಾಯಿಸುತ್ತಿರಬೇಕು.

ಆನ್ ಲೈನ್ ಬ್ಯಾಂಕಿಂಗ್ ಮಾಡುವಾಗ ಸಾರ್ವಜನಿಕ ಕಂಪ್ಯೂಟರ್ , ವೈ-ಫೈ  ಬಳಸುವುದರಿಂದ ದೂರ ಇರಿ. 

ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳಿ

ಪರವಾನಗಿ ಪಡೆದ ಆಂಟಿ-ವೈರಸ್ ಸಾಫ್ಟ್‌ವೇರ್ ಬಳಸಿ.

ನಿಮ್ಮ ಇಂಟರ್ನೆಟ್ ಅನ್ನು ಬಳಸದಿದ್ದಾಗ ಸಂಪರ್ಕ ಕಡಿತಗೊಳಿಸಿ. ಆಗಾಗ ನಿಮ್ಮ ಆಪ್ ಗಳನ್ನು ಅಪ್ಡೇಟ್ ಮಾಡುತ್ತಿರಬೇಕು.

ಇಮೇಲ್ ಲಿಂಕ್‌ಗಳನ್ನು ಬಳಸುವ ಬದಲು ಪ್ರತಿ ಬಾರಿ ನಿಮ್ಮ ಬ್ಯಾಂಕ್ URL ಟೈಪ್ ಮಾಡಿ.

ನಿಮ್ಮ ವ್ಯವಹಾರ ಮುಗಿಯುತ್ತಿದ್ದಂತೆ ಲಾಗ್ ಔಟ್​ ಮಾಡೋದನ್ನು ಮರೆಯಬೇಡಿ.

ಈಗ ಎಲ್ಲ ಬ್ಯಾಂಕ್ ಗಳು ನೋಟಿಫಿಕೇಶನ್ ಕಳಿಸುತ್ತಿರುತ್ತವೆ. ಆಗಾಗ ಮೊಬೈಲಿಗೆ ಬರುವ ಮೆಸೇಜ್ ಗಳನ್ನು ಪರಿಶೀಲಿಸುತ್ತಿರಬೇಕು.

ಹಣಕಾಸಿನ ಪಾವತಿ ವೇಳೆ ನೇರವಾಗಿ ಬ್ಯಾಂಕ್ ಆಪ್ ಗಳನ್ನು ಬಳಸಬೇಕು.

ನಿಮ್ಮ ಆನ್‌ಲೈನ್‌ ಬ್ಯಾಂಕಿಂಗ್ ಸಂಬಂಧಿಸಿದ  ಮಾಹಿತಿಯನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ.