DK Shivakumar ಸಾಲ ಎಷ್ಟಿದೆ ಗೊತ್ತಾ?

ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಡಿಕೆಶಿ ಕೊನೆಗೂ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ

ಡಿಕೆ ಶಿವಕುಮಾರ್ ಅವರ ಒಟ್ಟು ಆಸ್ತಿ, ನಗದು, ಜಮೀನು, ಚಿನ್ನಾಭರಣ, ಕಾರು ಸೇರಿದಂತೆ, ಅವರ ಒಟ್ಟು ಸಂಪತ್ತು ಎಷ್ಟಿದೆ ಎಂಬ ವಿಚಾರ ಚರ್ಚೆಯಾಗುತ್ತದೆ

ಶಿವಕುಮಾರ್ ಅವರ ಒಟ್ಟು ಆಸ್ತಿ ಮತ್ತು ಅವರ ಕುಟುಂಬದ ಒಟ್ಟು ಆಸ್ತಿಯನ್ನು ಗಮನಿಸಿದರೆ, 2023 ರಲ್ಲಿ ಅದು 1414 ಕೋಟಿ ರೂ. ಇದೆ

2018 ರಲ್ಲಿ ನೀಡಿದ ಮಾಹಿತಿಯ ಪ್ರಕಾರ, ಶಿವಕುಮಾರ್ ಅವರು 840 ಕೋಟಿ ರೂಪಾಯಿ ಆಸ್ತಿ ಹೊಂದಿದ್ದರು

ಇದು 2013ರಲ್ಲಿ ಇದ್ದ ಆಸ್ತಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಾಗಿದೆ. ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ಪ್ರಕಾರ ಡಿ.ಕೆ.ಶಿವಕುಮಾರ್ 12 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ

ಈ ಪೈಕಿ ಕೆಲವು ಖಾತೆಗಳನ್ನು ಅವರ ಸಹೋದರ ಡಿ.ಕೆ.ಸುರೇಶ್ ಅವರೊಂದಿಗೆ ಜಂಟಿಯಾಗಿ ನಿರ್ವಹಿಸುತ್ತಿದ್ದಾರೆ

ಒಟ್ಟು ಆಸ್ತಿ 1414 ಕೋಟಿ ರೂ.ಗಳಾಗಿದ್ದು, ಅವರ ಸಾಲದ ಮೊತ್ತ 225 ಕೋಟಿ ರೂ. ನಷ್ಟಿದೆ

ಇನ್ನೂ ಇಷ್ಟು ಕೋಟಿ ಹಣವಿದ್ದರೂ ಇನ್ನೂ ಯಾಕೆ ಡಿಕೆ ಶಿವಕುಮಾರ್​ ಅವರು 225 ಕೋಟಿ ಸಾಲವನ್ನು ತೀರಿಸಿಲ್ಲ ಅಂತ ಅದೆಷ್ಟೋ ಮಂದಿ ಪ್ರಶ್ನಿಸುತ್ತಿದ್ದಾರೆ

ಇನ್ನೂ ಎರಡೂವರೆ ವರ್ಷದ ಬಳಿಕ ಡಿಕೆಶಿ ಸಿಎಂ ಆಗ್ತಾರೆ