Black Sesame ಕಾಳಸರ್ಪದೋಷಕ್ಕೆ ಪರಿಹಾರ
ನಮ್ಮ ಸಂಪ್ರದಾಯದಲ್ಲಿ ಕಪ್ಪು ಎಳ್ಳಿಗೆ ವಿಶೇಷವಾದ ಸ್ಥಾನವಿದೆ.
ಕೇವಲ ಧಾರ್ಮಿಕ ಕಾರ್ಯ ಮಾತ್ರವಲ್ಲದೇ ಅಮಾವಾಸ್ಯೆಯ ಸಮಯದಲ್ಲಿ ಸಹ ಈ ಎಳ್ಳನ್ನು ನಾವು ಬಳಸುತ್ತೇವೆ
ಎಳ್ಳನ್ನು ದಾನ ಮಾಡುವುದರಿಂದ ಸಹ ಹಲವಾರು ಪ್ರಯೋಜನಗಳಿದೆ ಎನ್ನಲಾಗುತ್ತದೆ
ಶನಿಯ ಆಶೀರ್ವಾದ ಪಡೆಯಲು ನೀವು ಕಪ್ಪು ಎಳ್ಳನ್ನು ಶನಿವಾರ ಅರಳಿ ಮರದ ಬುಡಕ್ಕೆ ಅರ್ಪಿಸಬೇಕು
ನಿಮ್ಮ ವೃತ್ತಿ ಜೀವನದಲ್ಲಿ ನೀವು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದಕ್ಕೆ ಈ ಕಪ್ಪು ಎಳ್ಳು ಪರಿಹಾರ ನೀಡುತ್ತದೆ
ಆಫೀಸ್ಗೆ ಹೋಗುವಾಗ ಒಂದು ಹಿಡಿ ಕಪ್ಪು ಎಳ್ಳನ್ನು ತೆಗೆದುಕೊಂಡು ಹೋಗಿ, ದಾರಿಯಲ್ಲಿ ಹರಿಯುವ ನದಿಗೆ ಹಾಕಿ
ಶನಿವಾರ ಇರುವೆಗೆ ಹಾಗೂ ಶನಿ ದೇವಸ್ಥಾನಕ್ಕೆ ಕಪ್ಪು ಎಳ್ಳನ್ನು ಅರ್ಪಿಸಿ
ನಿಮಗೆ ಕಾಳಸರ್ಪ ದೋಷ ಇದ್ದರೆ ಕಪ್ಪು ಎಳ್ಳನ್ನು ದಾನ ಮಾಡಿ
ಶನಿವಾರ ಕಪ್ಪು ಎಳ್ಳು ಹಾಗೂ ಅದರ ಉಂಡೆಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ಮಾಡಿ