ಕಬ್ಬು ದರ ನಿಗದಿ ಹೋರಾಟದ ಮಧ್ಯೆಯೇ ವೈಯಕ್ತಿಕ ದ್ವೇಷಕ್ಕೆ ಬಲಿಯಾಯ್ತು ರೈತರು ಬೆಳೆದ ಕಬ್ಬು ಬೆಳೆ..!?,ಕಬ್ಬಿನ ಗದ್ದೆಗೆ ರಾತ್ರೋ ರಾತ್ರಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು.ಸುಟ್ಟು ಕರಕಲಾದ ಕಬ್ಬು.ಕಬ್ಬು ದರ ನಿಗದಿ ಹೋರಾಟದಲ್ಲಿ ಭಾಗಿಯಾಗಿದ್ದ ರೈತ.ಇಂಗಳಗಿ ಗ್ರಾಮದಲ್ಲಿ ತಡರಾತ್ರಿ ನಡೆದ ಘಟನೆ.ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಗ್ರಾಮ.ಅಶೋಕ್ ಕೆಂಪನ್ನವರ ಎಂಬುವ ರೈತರಿಗೆ ಸೇರಿದ ಐದು ಎಕರೆ ಕಬ್ಬಿಗೆ ಬೆಂಕಿ.ಶ್ರೀಶೈಲ ಕೋಮಾರ ಹಾಗೂ ಈರಪ್ಪ ಜಮಖಂಡಿ ಎಂಬುವರಿಗೆ ಸೇರಿದ ತಲಾ ಒಂದು ಎಕರೆ ಕಬ್ಬಿನ ಗದ್ದೆಗೂ ಬೆಂಕಿ.ಅಂದಾಜು ಹನ್ನೊಂದು ಲಕ್ಷದ ಮೌಲ್ಯದ ಕಬ್ಬು ಬೆಂಕಿಗಾಹುತಿ.ತಡರಾತ್ರಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು.ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿರೋ ಶಂಕೆ.ಮುಧೋಳ ಠಾಣೆಯಲ್ಲಿ ದೂರು ದಾಖಲಿಸಿದ ನೊಂದ ರೈತ.