ಹೋಮ್ » ವಿಡಿಯೋ

ಕಾಲಿವುಡ್​ನಲ್ಲಿ ಕೆ.ಜಿ.ಎಫ್ ಸಿನಿಮಾ ಬಿಡುಗಡೆಯ ಹೊಣೆ ಹೊತ್ತಿದ್ದ ತಮಿಳು ನಟ ವಿಶಾಲ್​ ಬಂಧನ..!

ಮನರಂಜನೆ14:56 PM December 20, 2018

ಚೆನ್ನೈನಲ್ಲಿ ತಮಿಳು ಸಿನಿಮಾ ನಿರ್ಮಾಪಕರು ಬೀದಿಯಲ್ಲೇ ಜಗಳವಾಡಿದ ಘಟನೆ ನಡೆದಿದೆ. ಅಲ್ಲದೆ ಬೀದಿಯಲ್ಲೇ ನಿಂತು ಹೊಡೆದಾಡಿಕೊಂಡಿದ್ದಾರೆ. ತಮಿಳು ನಟ ವಿಶಾಲ್​ ಹಲವು ಸಂಘಗಳಲ್ಲಿ ನಾನಾ ರೀತಿಯ ಹುದ್ದೆಗಳಲ್ಲಿದ್ದು, ಅವರನ್ನು ನಿರ್ಮಾಪಕರ ಸಂಘದಿಂದ ಪದಚ್ಯುತಿಗೊಳಿಸಬೇಕೆಂದು ಆಗ್ರಹಿಸಿ ನಿರ್ಮಾಪಕ ಅಲಗಪ್ಪನ್​ ಬಣದವರು, ನಿನ್ನೆ ಸಂಘದ ಕಚೇರಿಗೆ ಬೀಗ ಹಾಕಿದ್ದರು. ಆದರೆ ಇಂದು ಬಂದ ವಿಶಾಲ್​ ಆ ಬೀಗವನ್ನು ಹೊಡೆದು, ದುರ್ವರ್ತನೆ ತೋರಿದ್ದಾರೆ ಎಂಬ ಆರೋಪದಡಿ ಅವರನ್ನು ಬಂಧಿಸಲಾಗಿದೆ. ಒಬ್ಬ ವ್ಯಕ್ತಿಗೆ ಒಂದು ಸಂಘದಲ್ಲಿ ಒಂದೇ ಹುದ್ದೆ ನೀಡಬೇಕೆಂದು ನಿರ್ಮಾಪಕ ಅಲಗಪ್ಪನ್​ ಕಡೆಯವರು ಆಗ್ರಹಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಯಶ್​ ಅಭಿನಯದ ಕೆ.ಜಿ.ಎಫ್​ ತಮಿಳು ಸಿನಿಮಾವನ್ನು ತಮಿಳುನಾಡಿನಲ್ಲಿ ಬಿಡುಗಡೆ ಮಾಡುವ ಹೊಣೆ ಹೊತ್ತಿದ್ದರು.

Anitha E

ಇತ್ತೀಚಿನದು Live TV

Top Stories