ಹೋಮ್ » ವಿಡಿಯೋ » ರಾಜ್ಯ

ಬೆಂಗಳೂರು ಮೆಟ್ರೋ ಹಳಿ ಮೇಲೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ರಾಜ್ಯ03:09 PM IST Jan 11, 2019

ಬೆಂಗಳೂರು: ಇಲ್ಲಿನ ನ್ಯಾಷನಲ್ ಕಾಲೇಜು ಮೆಟ್ರೋ ರೈಲು ನಿಲ್ದಾಣದ ಹಳಿ ಮೇಲೆ ಯುವಕನೊಬ್ಬ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಸವನಗುಡಿ ನಿವಾಸಿ ವೇಣು (25) ಆತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ತಿಳಿದುಬಂದಿದೆ. ವೃತ್ತಿಯಲ್ಲಿ ಟೈಲರ್ ಆದ ವೇಣು, ಡಿ.ಕೆ.ಟೈಲರ್ ಶಾಪ್ ನಡೆಸುತ್ತಿದ್ದ. ಆತ್ಮಹತ್ಯಗೆ ಕಾರಣ ತಿಳಿದುಬಂದಿಲ್ಲ.ಬೆಳಗ್ಗೆ 11.20 ಕ್ಕೆ ಮೆಟ್ರೋ ಟ್ರ್ಯಾಕ್ ಮೇಲಕ್ಕೆ ವೇಣು ಜಿಗಿದಿದ್ದಾನೆ. ಅದೃಷ್ಟವಶಾತ್ ಹೈ ವೋಲ್ಟೇಜ್ ಲೈನ್ ಗೆ ಆತನ ದೇಹ ಟಚ್ ಆಗಿಲ್ಲ. ಹೀಗಾಗಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ರೈಲು ಕೂಡಲೇ ಬಂದಿದ್ದರಿಂದ ಆತನನ್ನು ರೈಲು ಉಜ್ಜಿಕೊಂಡು ಹೋಗಿದ್ದು, ತಲೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಪೆಟ್ಟಾಗಿದೆ. ಸದ್ಯ ಯುವಕನಿಗೆ ಪ್ರಜ್ಞೆ ಬಂದಿದ್ದು, ನಿಮ್ಹಾನ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂದೇ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

sangayya

ಇತ್ತೀಚಿನದು Live TV