ರಾಜ್ಯ ಸರ್ಕಾರಕ್ಕೆ ಇಂದು ಬೆಳಗ್ಗೆ 11 ಗಂಟೆವರೆಗೆ ಗಡುವು ಕೊಟ್ಟಿದ್ದೆವು. ಆದರೆ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ, ಇಂದು ನಾವೇ ಕೆಆರ್ಎಸ್ ಡ್ಯಾಂಗೆ ಮುತ್ತಿಗೆ ಹಾಕಿ ನೀರನ್ನು ಬಿಡಿಸಿಕೊಳ್ಳುತ್ತೇವೆ. 8 ದಿನದಿಂದ ಧರಣಿ ಕುಳಿತಿದ್ದೇವೆ. ಇವರಿಗೆ ಎರಡೂವರೆ ಟಿಎಂಸಿ ನೀರನ್ನು ಕೊಡಲು ಸಾಧ್ಯವಾಗುತ್ತಿಲ್ಲ. ನೀರು ಬಿಡಿಸುತ್ತೇವೆ ಎಂದು ಸರ್ಕಾರದಿಂದ ನಮಗೆ ಯಾರೂ ಸಹ ಭರವಸೆ ಕೊಟ್ಟಿಲ್ಲ ಎಂದು ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದ್ದಾರೆ.