ಹೋಮ್ » ವಿಡಿಯೋ » ರಾಜ್ಯ

ಶಾಸಕ ಎಂಟಿಬಿ ನಾಗರಾಜ್​ ಮನವೊಲಿಸಿದ್ದೇವೆ; ಒಗ್ಗಟ್ಟಾಗಿ ಇರುತ್ತೇವೆ; ಡಿಸಿಎಂ, ಡಿಕೆಶಿ

ರಾಜ್ಯ13:38 PM July 13, 2019

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್​ ಅವರ ಮನೆಗೆ ನೆನ್ನೆ ರಾತ್ರಿಯಿಂದ ಕಾಂಗ್ರೆಸ್​ನ ಘಟಾನುಘಟಿ ನಾಯಕರು ಭೇಟಿ ನೀಡಿ, ಮನವೊಲಿಕೆಗೆ ಯತ್ನಿಸಿದ್ದಾರೆ. ಹಲವು ಗಂಟೆಗಳಿಂದ ಅವರ ಮನೆಯಲ್ಲೇ ಬೀಡುಬಿಟ್ಟಿದ್ದ ಡಿಕೆ ಶಿವಕುಮಾರ್ ಹಾಗೂ ಡಿಸಿಎಂ ಪರಮೇಶ್ವರ್​​ ಅವರು ಎಂಟಿಬಿ ನಾಗರಾಜ್ ಮನವೊಲಿಸುವಲ್ಲಿ ಬಹುತೇಕ ಯಶಸ್ವಿಯಾದಂತಿದೆ. ಡಿಸಿಎಂ ಪರಮೇಶ್ವರ್​ ಮಾತನಾಡಿ, ರಾಜೀನಾಮೆ ವಾಪಸ್​ ತೆಗೆದುಕೊಳ್ಳುವಂತೆ ಮನವೊಲಿಸಿದ್ದೇವೆ. ಡಾ. ಸುಧಾಕರ್​ ಅವರಿಗೂ ಮನವೊಲಿಸಿ ಪಕ್ಷಕ್ಕೂ ಒಳ್ಳೆಯದಾಗುವ ತೀರ್ಮಾನ ತೆಗೆದುಕೊಳ್ಳುವುದಾಗಿ ಎಂಟಿಬಿ ನಾಗರಾಜ್​ ತಿಳಿಸಿದ್ದಾರೆ ಎಂದರು. ಇನ್ನೂ, ಸಚಿವ ಡಿಕೆಶಿ ಮಾತನಾಡಿ, ನಾನು ನಾಗರಾಜ್​ 30-40 ವರ್ಷದಿಂದ ಜೊತೆಯಲ್ಲೇ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಕಷ್ಟಪಟ್ಟು ಹೋರಾಟ ಮಾಡಿ ಪಕ್ಷ ಕಟ್ಟಿದ್ದೇವೆ. ಅವರು ಗೆದ್ದಾಗ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಆಕಸ್ಮಿಕ ಘಟನೆಗಳು ಸಂಭವಿಸುತ್ತವೆ, ಅವುಗಳನ್ನು ಮರೆತು ಒಗ್ಗಟ್ಟಿನಿಂದ ಇರೋಣ, ಸಾಯೋಣ ಎಂಬ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

sangayya

ಇತ್ತೀಚಿನದು

Top Stories

//