ಹೋಮ್ » ವಿಡಿಯೋ » ರಾಜ್ಯ

ಬಿಜೆಪಿ ಮುಖಂಡ ಸಿ.ಟಿ.ರವಿಗೆ ಗ್ರಾಮಸ್ಥರಿಂದ ಘೇರಾವ್

ರಾಜ್ಯ03:09 PM IST Apr 17, 2019

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚನೆಗೆ ಹೋಗಿದ್ದ ಶಾಸಕ ಸಿ.ಟಿ.ರವಿಗೆ ಚಿಕ್ಕಮಗಳೂರು ತಾಲೂಕಿನ ದೇವನೂರಿನಲ್ಲಿ ಗ್ರಾಮಸ್ಥರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮೂರಿನಲ್ಲಿ ಜನ-ಜಾನುವಾರುಗಳಿಗೆ ಕುಡಿಯೋಕು ನೀರಿಲ್ಲ. ತೋಟಗಳು ಒಣಗಿ ನಿಂತಿವೆ. ಕೆರೆಗಳು ಬತ್ತಿವೆ. ನೀರನ್ನ ಕೇಳಿದ್ರೆ ಕರಗಡ ಕಾಮಗಾರಿ ಆಗ್ತಿದೆ ನೀರು ಬರುತ್ತೆ ಅಂತ ಹೇಳ್ತೀರ ಹೋಗ್ತೀರಾ. ಇಲ್ಲಿನ ನಮ್ಮ ಕಷ್ಟ ಕೇಳೋರು ಯಾರಿಲ್ಲ ಅಂತಾ ಸ್ಥಳಿಯರು ಶಾಸಕರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಇದೇ ವೇಳೆ ಶಾಸಕ ಸಿ.ಟಿ.ರವಿ ಇದು ದೇಶದ ಚುನಾವಣೆ ಮೋದಿಗೆ ಮತ ಹಾಕಿ ಎಂದಾಗ, ಸ್ಥಳಿಯರು ನೀವು ಹೇಳಿದ್ರು ಮೋದಿಗೆ ಓಟ್ ಹಾಕ್ತೀವಿ, ಹೇಳದಿದ್ರು ಓಟ್ ಹಾಕ್ತೀವಿ. ಮೊದಲು ನಮಗೆ ನೀರು ಕೊಡಿ ಎಂದು ಆಗ್ರಹಿಸಿದ್ದಾರೆ

Shyam.Bapat

ಇತ್ತೀಚಿನದು Live TV