ಹೋಮ್ » ವಿಡಿಯೋ » ರಾಜ್ಯ

ರಸ್ತೆ ದಾಟುವಾಗ ಟಂಟಂ ಡಿಕ್ಕಿ ಹೊಡೆದು ಬಾಲಕ ಸಾವು; ವಿಜಯಪುರದಲ್ಲಿ ಪೋಷಕರ ಕಣ್ಣೆದುರೇ ಘೋರ ದುರಂತ

ರಾಜ್ಯ19:46 PM November 05, 2019

ಈ ದೃಷ್ಯ ನೋಡಿದರೆ ಎಂಥವರ ಮನಸ್ಸೂ ಕಣ್ಣೀರಿಡುತ್ತೆ. ಪೋಷಕರು ಅದರಲ್ಲೂ ತಮ್ಮ ಮಕ್ಕಳೊಂದಿಗೆ ರಸ್ತೆಯ ಮೇಲೆ ಹೋಗುವಾಗ ಏಕೆ ಮುನ್ನೇಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ದೃಷ್ಯ ಸಾಕ್ಷಿಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಷ್ಯ ಘೋರವಾಗಿದ್ದು, ತನ್ನ ಸಂಬಂಧಿಕರೊಂದಿಗೆ ರಸ್ತೆಯಲ್ಲಿ ಹೋಗುತ್ತಿದ್ದ ಮೂರು ವರ್ಷದ ಪುಟ್ಟ ಬಾಲಕ ರಸ್ತೆಯ ಮೇಲೆ ಓಡಿ ಹೋಗುವಾಗ ಟಂಟಂವೊಂದು ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಈ ಭಯಾನಕ ಘಟನೆ ನಡೆದಿದ್ದು ಬಸವಣ್ಣನ ತವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ನಗರದಲ್ಲಿ. 3 ವರ್ಷದ ಬಾಲಕ ಭೀಮನಗೌಡ ಮೇಲ್ದಾಪೂರ ಈ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ. ಬಾಲಕ ರಸ್ತೆ ದಾಟುವಾಗ ಟಂಟಂ ಡಿಕ್ಕಿಯಾದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಾಲಕನಿಗೆ ಡಿಕ್ಕಿ ಹೊಡೆದ ಬಳಿಕ ಚಾಲಕ ಟಂಟಂ ಸಮೇತ ಪರಾರಿಯಾಗಿದ್ದಾನೆ.

sangayya

ಇತ್ತೀಚಿನದು

Top Stories

//