ಹೋಮ್ » ವಿಡಿಯೋ » ರಾಜ್ಯ

Video: ಆನೆನೂ ಧಮ್​ ಹೊಡೆಯುತ್ತೆ: ಈ ವಿಡಿಯೋ ನೋಡಿದರೆ ನೀವೂ ಗಾಬರಿಯಾಗುತ್ತೀರಾ?

ಟ್ರೆಂಡ್22:57 PM July 11, 2019

ಮನುಷ್ಯ ಚಂದ್ರನ ಮೇಲೆ ಕಾಲಿಟ್ಟರೂ ಹುಡುಗಿಯರು ಸಿಗರೇಟ್ ಸೇದೋದನ್ನ ನೋಡಿದರೆ ಸಾಕು ಜನರ ಈಗಲೂ ಹುಬ್ಬೇರಿಸುತ್ತಾರೆ. ಇಂತಹದರಲ್ಲಿ ಕೋತಿ, ನಾಯಿ ಎಣ್ಣೆ ಹೊಡೆದು ತೂರಾಡಿದರೆ ಹೇಗಿರುತ್ತೆ ಹೇಳಿ. ಈಗಾಗಲೇ ಕೋತಿ ಕುಡಿದು ಮಾಡಿದ ಅವಾಂತರವನ್ನು ನೋಡಿದ್ದೇವೆ. ಆದರೆ ಈಗ ಇಲ್ಲೊಂದು ಕಾಡಾನೆ ಧಮ್ ಹೊಡೆದು ಹೊಗೆ ಬಿಡೋದನ್ನ ನೋಡೋಕು ಸಿದ್ಧವಾಗಿ. ನಾಗರಹೊಳೆಯ ರಾಷ್ಟ್ರೀಯ ಉದ್ಯಾನದಲ್ಲಿ ಆನೆಯೊಂದು ಧೂಮಪಾನ ಮಾಡಿ, ಹೊಗೆ ಬಿಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ಆನೆ ಸೊಂಡಿಲನ್ನು ತೆಗೆದು ಬಾಯಲ್ಲಿ ಇಟ್ಟುಕೊಳುತ್ತೆ. ನಂತರ ಹಾಗೇ ಹೊಗೆ ಕೂಡ ಬಿಡುತ್ತೆ. ಇದನ್ನ ನೋಡಿದ ಪ್ರತಿಯೊಬ್ಬರಿಗೂ ಅಚ್ಚರಿ ಆಗೋದು ಸಹಜ. ಇದೇನಪ್ಪಾ ಆನೆ ಕೂಡ ಮನುಷ್ಯರಂತೆ ಧಮ್ ಹೊಡೆಯುತ್ತಿದೆಯಾ ಎಂದೆನಿಸುತ್ತದೆ. ಆದರೆ ನಿಜಕ್ಕೂ ಆನೆ ಧೂಮಪಾನ ಮಾಡಿದೆಯಾ ಅನ್ನೋದೇ ಈಗ ಯಕ್ಷ ಪ್ರಶ್ನೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 2016ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ವನ್ಯಜೀವಿ ಸಂರಕ್ಷಣಾ ಸೊಸೈಟಿಯ ತಂಡದ ಸಹಾಯಕ ನಿರ್ದೇಶಕರೊಬ್ಬರು ಆನೆಯ ಈ ವಿಚಿತ್ರ ವರ್ತನೆ ಕಂಡ ತಕ್ಷಣ ಅದರ ವಿಡಿಯೋ ಮಾಡಿದ್ದರು. ಆದರೆ ಇತ್ತೀಚೆಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಅರಣ್ಯದಲ್ಲಿನ ಇದ್ದಿಲು ತಿಂದು ಆನೆ ಹೊಗೆ ಬಿಡುತ್ತಿದೆ ಎನ್ನುತ್ತಾರೆ ತಜ್ಞರ. ಆದರೆ ನಿಜಕ್ಕೂ ಆನೆ ಏನು ಮಾಡಿದೆ ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ ಈಗ ಇದರ ಬಗ್ಗೆ ವಿಜ್ಞಾನಿಗಳು ಹಾಗೂ ಪ್ರಾಣಿತಜ್ಞರು ತಲೆಕೆಡಿಸಿಕೊಂಡಿದ್ದಾರೆ.

webtech_news18

ಇತ್ತೀಚಿನದು Live TV