ಹೋಮ್ » ವಿಡಿಯೋ » ರಾಜ್ಯ

ಮಾನವ ಕಲ್ಯಾಣ ಮೂಲಕ ಸಿದ್ದಗಂಗಾ ಶ್ರೀಗಳಿಗೆ ದೈವಸಿದ್ಧಿ: ವೀರೇಂದ್ರ ಹೆಗ್ಗಡೆ

ರಾಜ್ಯ18:47 PM January 21, 2019

ಸಿದ್ದಗಂಗಾ ಶ್ರೀಗಳ ದೇಹತ್ಯಾಗಕ್ಕೆ ನಾವು ದುಃಖಪಡಬೇಕಿಲ್ಲ. ಅವರು ತಮ್ಮ ದೇಹವನ್ನು ಚೆನ್ನಾಗಿ ಸದ್ವಿನಿಯೋಗ ಮಾಡಿಕೊಂಡು ಲೋಕಕಲ್ಯಾಣ ಮಾಡಿದ್ದಾರೆ. ಜನಕಲ್ಯಾಣದ ಮೂಲಕ ಅವರು ನೇರವಾಗಿ ಸ್ವರ್ಗಾರೋಹಣ ಮಾಡುತ್ತಿದ್ದಾರೆ ಎಂದು ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಶ್ರೀಗಳು ಇವತ್ತು ನಮ್ಮ ಮುಂದೆ ಇಲ್ಲ. ನಾವು ಮುಕ್ತಿ ಸಿಗಬೇಕೆಂದು ಎಲ್ಲರೂ ಬಯಸುತ್ತೇವೆ. ಶ್ರೀಗಳು ಮೋಕ್ಷ ಪಡೆದಿದ್ದಾರೆ. ಧರ್ಮ, ನ್ಯಾಯ ಸತ್ಯದಲ್ಲಿ ಬದುಕಿ ಲೋಕಕ್ಕೆ ಬೇಕಾದ ಎಲ್ಲಾ ಹಿತವನ್ನ ಮಾಡಿ ಅವರು ನೇರವಾಗಿ ನಡೆದುಕೊಂಡೇ ಸ್ವರ್ಗಾರೋಹಣ ಮಾಡಿದ್ದಾರೆಂಬುದು ನನ್ನ ಪೂರ್ಣ ನಂಬಿಕೆ ಎಂದು ಹೆಗ್ಗಡೆ ಅವರು ತಿಳಿಸಿದರು.

sangayya

ಇತ್ತೀಚಿನದು

Top Stories

//