ಹೋಮ್ » ವಿಡಿಯೋ » ರಾಜ್ಯ

ಬಂಧಿತ ಉಗ್ರ ನೀಡಿದ ಮಾಹಿತಿ ಮೇರೆಗೆ ರಾಮನಗರದಲ್ಲಿ ಎರಡು ಸಜೀವ ಬಾಂಬ್​ಗಳನ್ನು ವಶಕ್ಕೆ ಪಡೆದ ಎನ್​ಐಎ

ರಾಜ್ಯ17:01 PM June 26, 2019

ಬಂಧಿತ ಉಗ್ರ ನೀಡಿದ ಮಾಹಿತಿ ಮೇರೆಗೆ ರಾಮನಗರದಲ್ಲಿ ಎರಡು ಸಜೀವ ಬಾಂಬ್​ಗಳನ್ನು ವಶಕ್ಕೆ ಪಡೆದ ಎನ್​ಐಎ. ಬಾಂಗ್ಲಾದೇಶದ ಜೆಎಂಬಿ ಸಂಘಟನೆಯ ಶಂಕಿತ ಉಗ್ರ ಅಬೀಬುರ್ ರೆಹಮಾನ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ರಾಮನಗರ ಟಿಪ್ಪುನಗರದ 23ನೇ ವಾರ್ಡ್​ನ ಬ್ರಿಡ್ಜ್​ ಬಳಿ ಬಾಂಬ್​ಗಳನ್ನು ಇರಿಸಿದ್ದ ಸ್ಥಳದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಆತ ಹೇಳಿದ ಸ್ಥಳದಲ್ಲಿ ಶೋಧ ನಡೆಸಿದಾಗ ಎರಡು ಸಜೀವ ಬಾಂಬ್​ಗಳು ಸಿಕ್ಕಿವೆ. ಇನ್ನು ಹಲವು ಸಜೀವ ಬಾಂಬ್​ಗಳನ್ನು ಬಚ್ಚಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.ಸಿಐಡಿ ಕಚೇರಿಯಲ್ಲಿ ಎನ್​ಐಎ ತಂಡದಿಂದ ಉಗ್ರ ರೆಹಮಾನ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆತ ನೀಡಿದ ಮಾಹಿತಿ ಮೇರೆಗೆ ಎರಡು ಬಾಂಬ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಇಂದು ಸಂಜೆ ಅಬೀಬುರ್ ರೆಹಮಾನ್​ನನ್ನು ಎನ್​ಐಎ ಪಶ್ಚಿಮ ಬಂಗಾಳಕ್ಕೆ ಕರೆದುಕೊಂಡು ಹೋಗಲಿದೆ. 2008ರಲ್ಲಿ ಬಿಹಾರದ ಬೌದ್ಧ ಗಯಾ ಸ್ಫೋಟ ಪ್ರಕರಣದಲ್ಲಿ ಈತನ ಪಾತ್ರ ಇತ್ತು. ಕಚ್ಚಾ ಬಾಂಬ್ ತಯಾರು ಮಾಡುವಲ್ಲಿ ಅಬೀಬುರ್ ಪರಿಣಿತಿ ಪಡೆದಿದ್ದಾನೆ.

Shyam.Bapat

ಇತ್ತೀಚಿನದು Live TV

Top Stories