ಹೋಮ್ » ವಿಡಿಯೋ » ರಾಜ್ಯ

ಅಪಾಯದ ಮಟ್ಟ ಮೀರಿದ ತುಂಗಭದ್ರಾ ಡ್ಯಾಂ; ಹಂಪಿ ಸ್ಮಾರಕಗಳು ಮುಳುಗಡೆ

ರಾಜ್ಯ10:30 AM October 23, 2019

ಬಳ್ಳಾರಿಯಲ್ಲಿ ತುಂಗಭದ್ರಾ ಜಲಾಶಯ ತುಂಬಿ ಹರಿಯುತ್ತಿದೆ. ಡ್ಯಾಂನ 33 ಕ್ರಸ್ಟ್ ಗೇಟ್ಗಳಿಂದ ನೀರು ಬಿಡುಗಡೆಯಾಗಿದೆ. ನದಿಗೆ 1.85 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಡ್ಯಾಂನಲ್ಲಿ ಸದ್ಯ 100.75 ಟಿಎಂಸಿ ನೀರು ಸಂಗ್ರಹವಾಗಿದ್ದು, ಅಪಾಯಮಟ್ಟದಲ್ಲಿ ತುಂಗಭದ್ರಾ ಮೀರಿ ಹರಿಯುತ್ತಿದೆ. ವಿಶ್ವಪ್ರಸಿದ್ಧ ಹಂಪಿಯ ಸ್ಮಾರಕಗಳು ಮುಳುಗಡೆಯಾಗಿವೆ. ಹಂಪಿಯ ಪುರಂದರದಾಸರ ಮಂಟಪ, ಸೀತೆ ಸೆರಗು ಸ್ಮಾರಕ ಸಂಪೂರ್ಣ ಮುಳುಗಡೆಯಾಗಿದೆ. ರಾಮ-ಲಕ್ಷ್ಮಣ ದೇವಸ್ಥಾನ ಆವರಣಕ್ಕೆ ನೀರು ನುಗ್ಗಿದೆ. ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಕೋಟೆ ಆಂಜನೇಯ ದೇವಸ್ಥಾನ ಮುಳುಗಡೆಯಾಗಿದೆ. ನದಿಪಾತ್ರದ ಹೋಟೆಲ್, ಮನೆಗೆ ನೀರು ನುಗ್ಗಿದೆ.

sangayya

ಇತ್ತೀಚಿನದು Live TV
corona virus btn
corona virus btn
Loading