ನವದೆಹಲಿ: ಕನ್ನಡ ಭಾಷೆ ಉಳಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿದೆ. ತಿದ್ದುಪಡಿ ಮಸೂದೆ ತರಬೇಕಿದೆ. ಆ ನಿಟ್ಟಿನಲ್ಲಿ ಕರಡು ರೂಪಿಸಿದ್ದೇವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹಾಗೂ ನಿಯೋಗದ ನೇತೃತ್ವ ವಹಿಸಿರುವ ಟಿ.ಎಸ್. ನಾಗಾಭರಣ ತಿಳಿಸಿದ್ದಾರೆ. ಇಂಗ್ಲೀಷ್ ಎಂಬುದು ಅನ್ನ ಕೊಡುವ ಭಾಷೆಯಾದರೆ, ಸಂಸ್ಕೃತಿ ಮತ್ತು ತನ್ನತನ ಕೊಡುವುದು ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಾಗಿರುತ್ತದೆ ಎಂದು ನಾಗಾಭರಣ ಹೇಳಿದ್ದಾರೆ.