ಹೋಮ್ » ವಿಡಿಯೋ » ರಾಜ್ಯ

ಮಾನವೀಯತೆಗೆ ಮೆಚ್ಚುಗೆ; ಅಂಧರ ಕೈ ಹಿಡಿದು ರಸ್ತೆ ದಾಟಿಸಿದ ಟ್ರಾಫಿಕ್​ ಪೊಲೀಸ್​

ರಾಜ್ಯ12:07 PM January 26, 2019

ರಸ್ತೆ ದಾಟಲು ಪರದಾಡುತ್ತಿದ್ದ ಅಂಧರನ್ನು ಟ್ರಾಫಿಕ್​ ಪೋಲೀಸ್​ ರಸ್ತೆ ದಾಟಿಸಿ ಮಾನವೀಯತೆ ಮೆರೆದಿದ್ಧಾರೆ. ನಿನ್ನೆ ಸಂಜೆ ನಗರದ ಟೌನ್​ ಹಾಲ್ ಬಳಿ ಅಂಧರ ಗುಂಪೊಂದು ರಸ್ತೆ ದಾಟಲು ಪರಿತಪಿಸುತ್ತಿತ್ತು. ಈ ವೇಳೆ ಅಂಧರ ಕಷ್ಟ ನೋಡಿದ ಟ್ರಾಫಿಕ್​ ಪೊಲೀಸ್​ ಸಹಾಯಕ್ಕೆ ಮುಂದಾಗಿದ್ದಾರೆ. ವಾಹನಗಳನ್ನು ಅಡ್ಡಗಟ್ಟಿ ಅಂಧರ ಕೈಹಿಡಿದು ರಸ್ತೆ ದಾಟಿಸಿದ್ದಾರೆ. ಅಷ್ಟೇ ಅಲ್ಲದೇ ಅವರು ತಲುಪಬೇಕಾಗಿರುವ ವಿಳಾಸ ಕೇಳಿ ಬಸ್​ ಹತ್ತಿಸಿದ್ದಾರೆ. ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ಹಲಸೂರು ಗೇಟ್​ ಸಂಚಾರಿ ಠಾಣೆಯ ಟ್ರಾಫಿಕ್​ ಪೊಲೀಸಪ್ಪನ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

sangayya

ಇತ್ತೀಚಿನದು Live TV

Top Stories

//