ಹೋಮ್ » ವಿಡಿಯೋ » ರಾಜ್ಯ

ಬಿಬಿಎಂಪಿ ಹಂಚಿದ ಮನೆಗಳ ಮೇಲೆ ಹೈಟೆನ್ಷನ್​ ಲೈನ್​; ಆತಂಕದಲ್ಲಿ ಸ್ಲಂ ನಿವಾಸಿಗಳು

ರಾಜ್ಯ10:28 AM June 23, 2019

ಸೂರಿಲ್ಲದವರಿಗೆ ಸ್ವರ್ಗವಾಗಬೇಕಿದ್ದ ಮನೆಗಳು ಬಡವರ ಪಾಲಿನ ಯಮಪಾಶಗಳಾಗುತ್ತಿವೆ. ಇಲ್ಲಿ ಬಡವರ ಜೀವ ತೆಗೆಯಲು ಕಾದು ಕೂತಿದ್ದಾನೆ ಯಮ. ಹೌದು ಬಿಬಿಎಂಪಿ ಸ್ಲಂ ನಿವಾಸಿಗಳಿಗೆ ಮನೆ ಹಂಚಿಕೆ ಮಾಡಿದ್ದೇನೋ ನಿಜ. ಆದ್ರೆ ಮನೆಗಳ ಮೇಲೆ ಡೆಡ್ಲಿ ಹೈಟೆನ್ಷನ್ ಲೈನ್ ಹೋಗಿದ್ದು ಜನರ ಆಹುತಿಗಾಗಿ ಕಾಯುತ್ತಿವೆ. ಇತ್ತೀಚೆಗಷ್ಟೇ ಹೈ ಟೆನ್ಷನ್ ವೈರ್ ಕೆಳಗಡೆ ಕಟ್ಟಡ ನಿರ್ಮಿಸುವಂತಿಲ್ಲ ಅಂತ ಬಿಬಿಎಂಪಿ ಕಾನೂನು ರೂಪಿಸಿತ್ತು. ಆದ್ರೆ ಮಹಾಲಕ್ಷ್ಮಿ ಲೇಔಟ್ ವಾರ್ಡ್ನಲ್ಲಿ ಇದ್ಯಾವ ರೂಲ್ಸ್ ಇಲ್ಲ ಅಂತ ಕಾಣುತ್ತೆ. ಶುಕ್ರವಾರ ಬಡವರಿಗೆ ಮನೆ ಹಂಚಿದ ಡೆಪ್ಯೂಟಿ ಮೇಯರ್ ಅವರಿಗೂ ಇದು ಗಮನಕ್ಕೆ ಬಂದಿಲ್ಲ ಅಂತ ಕಾಣುತ್ತೆ. ಈಗಾಗಲೇ 46 ಮನೆಗಳನ್ನು ನಿರ್ಮಾಣ ಮಾಡಿರುವ ಪಾಲಿಕೆ, ಇನ್ನೂ 127 ಮನೆಗಳು ತಲೆ ಎತ್ತುವ ಹಂತದಲ್ಲಿವೆ. ಆದ್ರೆ ಇಂತಹ ಮನೆಗಳು ಜನರ ಆಹುತಿಗಾಗಿ ಕಾಯುತ್ತಿದ್ದರೂ ಬಿಬಿಎಂಪಿ ಮಾತ್ರ ಮೌನ ವಹಿಸಿದ್ಯಾಕೆ ಅಂತ ಗೊತ್ತಾಗ್ತಿಲ್ಲ.

sangayya

ಇತ್ತೀಚಿನದು

Top Stories

//