ಕನ್ನಡ ರಾಜ್ಯೋತ್ಸವದಂದು ಹಲವು ಜಿಲ್ಲೆಗಳಲ್ಲಿ ಕನ್ನಡ ಬಾವುಟ ಹಾರಿಸದ ಹಿನ್ನೆಲೆ, ವಿದ್ಯಾರ್ಥಿಯೊಬ್ಬ ತನಗೆ ತಾಲೂಕು ಆಡಳಿತದ ವತಿಯಿಂದ ಕೊಡಲಾಗುತ್ತಿದ್ದ ಸನ್ಮಾನವನ್ನು ತಿರಸ್ಕರಿಸಿದ್ದಾನೆ. ಸಂಕೀರ್ತ್ ಕರುವಾನೆ ಪ್ರಶಸ್ತಿ ತಿರಸ್ಕರಿಸಿದ ಬಾಲಕ. ತಂದೆ ನವೀನ್ ಕರುವಾನೆ ತನ್ನ ಮಗನಿಗೆ ಪ್ರಶಸ್ತಿ ಬೇಡ ಎಂದು ಹೇಳಿದ್ದಾರೆ. ನನ್ನ ಮಗ ಹೆಚ್ಚಿನ ಅಂಕ ಪಡೆಯಲು ಪ್ರಯತ್ನಿಸಿದ, ಸಹಕರಿಸಿದ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅಭಿನಂದಿಸುತ್ತೇನೆ. ಆದರೆ ನನ್ನ ಮಗನಿಗೆ ಈ ಪ್ರಶಸ್ತಿ, ಸನ್ಮಾನ ಬೇಡ. ಯಾಕೆಂದರೆ ಇಂದು ಕನ್ನಡ ರಾಜ್ಯೋತ್ಸವ ಆದರೆ ರಾಜ್ಯದ 20 ಜಿಲ್ಲೆಗಳಲ್ಲಿ ಕನ್ನಡ ಬಾವುಟವನ್ನು ಹಾರಿಸಲು ಅವಕಾಶ ಮಾಡಿಕೊಟ್ಟಿಲ್ಲ. ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ನೋವಾಗಿದೆ. ಹೀಗಾಗಿ ತಾಲೂಕು ಆಡಳಿತ ನೀಡುವ ಸನ್ಮಾನವನ್ನು ಸ್ವೀಕಾರ ಮಾಡುತ್ತಿಲ್ಲ, ಎಂದು ಹೇಳಿದ್ದಾರೆ.