Home »
state »

st-somashekhar-criticizes-dinesh-gundurao-sgh

ಇವನು ಕೆಪಿಸಿಸಿ ಅಧ್ಯಕ್ಷನಾ, ಸಿದ್ದರಾಮಯ್ಯನ ಚೇಲನಾ?: ದಿನೇಶ್ ಗುಂಡೂರಾವ್ ವಿರುದ್ಧ ಎಸ್​ಟಿ ಸೋಮಶೇಖರ್ ಕಿಡಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಯಶವಂತಪುರ ಕ್ಷೇತ್ರದ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಹರಿಹಾಯ್ದಿದ್ದಾರೆ. 120 ವರ್ಷಗಳ ಇತಿಹಾಸ ಇರುವ ಕೆಪಿಸಿಸಿಗೆ ಅಧ್ಯಕ್ಷನಾಗಲು ಇವನು ಯೋಗ್ಯನಲ್ಲ. ಇವನು ಕೆಪಿಸಿಸಿ ಅಧ್ಯಕ್ಷನಾ, ಸಿದ್ದರಾಮಯ್ಯನ ಚೇಲನಾ? ಎಂದು ಸೋಮಶೇಖರ್ ಪ್ರಶ್ನಿಸಿದ್ಧಾರೆ. ಅನರ್ಹ ಶಾಸಕರಿಗೆ ಒಂದು ನ್ಯಾಯ, ರಮೇಶ್ ಕುಮಾರ್ಗೆ ಒಂದು ನ್ಯಾಯ ಎಂದು ಕೆಹೆಚ್ ಮುನಿಯಪ್ಪ ಪ್ರಶ್ನಿಸಿದ್ದು ಸರಿಯಾಗಿಯೇ ಇದೆ. ತನ್ನನ್ನು ಸೋಲಿಸಿದ್ದು ರಮೇಶ್ ಕುಮಾರ್ ಎಂದು ಮುನಿಯಪ್ಪ ಸಿಎಲ್ಪಿ ಸಭೆಯಲ್ಲಿ ಹೇಳಿದ್ದರೂ ರಮೇಶ್ ಕುಮಾರ್ಗೆ ದಿನೇಶ್ ಗುಂಡೂರಾವ್ ಒಂದು ನೋಟೀಸ್ ಕೂಡ ಕೊಡಲಿಲ್ಲ ಎಂದು ಎಸ್.ಟಿ. ಸೋಮಶೇಖರ್ ಆರೋಪಿಸಿದ್ಧಾರೆ.

ಇತ್ತೀಚಿನದುLIVE TV