ಹೋಮ್ » ವಿಡಿಯೋ » ರಾಜ್ಯ

ಶರಣಗೌಡ ಕಂದಕೂರು ಮತ್ತು ಬಿ.ಎಸ್. ಯಡಿಯೂರಪ್ಪ ಒಂದೇ ಟ್ರೈನ್​ನ ಒಂದೇ ಬೋಗಿಯಲ್ಲಿ ಪ್ರಯಾಣ

ರಾಜ್ಯ14:17 PM March 01, 2019

ಆಪರೇಶನ್ ಕಮಲ ಆಡಿಯೋ ಪ್ರಕರಣದ ದೂರುದಾರ ಶರಣಗೌಡ ಕಂದಕೂರು ಮತ್ತು ಬಿ.ಎಸ್. ಯಡಿಯೂರಪ್ಪ ಒಂದೇ ಟ್ರೈನ್ ಒಂದೇ ಬೋಗಿಯಲ್ಲಿ ಬೆಂಗಳೂರಿನಿಂದ ಯಾದಗಿರಿವರೆಗೆ ಪ್ರಯಾಣ ಬೆಳೆಸಿರುವುದು ಕೂತೂಹಲಕ್ಕೆ ಕಾರಣವಾಯಿತು. ಬೆಂಗಳೂರಿನ ಯಲಹಂಕದಿಂದ ಯಾದಗಿರಿಗೆ ಉದ್ಯಾನ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶರಣಗೌಡ ಕಂದಕೂರು ಮತ್ತು ಯಡಿಯೂರಪ್ಪ ಪ್ರಯಾಣಿಸಿದರು. ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಪುತ್ರ ಮಹೇಶ್ ಗೌಡನ ಮದುವೆಗೆ ಆಗಮಿಸಿದ ಯಡಿಯೂರಪ್ಪ ಮತ್ತು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ, ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಪುತ್ರ ಶರಣಗೌಡ ಒಂದೇ ಟ್ರೈನ್ ನಲ್ಲಿ ಯಾದಗಿರಿಗೆ ಆಗಮಿಸಿದರು.ಬೆಳಿಗ್ಗೆ ಈ ಮೂರು ನಾಯಕರು ಒಂದೇ ಬೋಗಿಯಿಂದ ಇಳಿಯುತ್ತಿರುವಾಗ ಶರಣಗೌಂಡ ಕಂದಕೂರು ಮೊದಲಿಗೆ ತರಾತುರಿಯಲ್ಲಿ ಇಳಿದು ಹೊರಡುತ್ತಿರುವುದು ಗಮನಸೆಳೆಯಿತು.

Shyam.Bapat

ಇತ್ತೀಚಿನದು Live TV

Top Stories

//