ಹೋಮ್ » ವಿಡಿಯೋ » ರಾಜ್ಯ

Video- ಉಪರಾಷ್ಟ್ರಪತಿ ಚಪ್ಪಲಿ ಕಳವು?: ಸಂಸದರ ನಿವಾಸದಲ್ಲಿ ಚಪ್ಪಲಿ ಕಾಣದೆ ಪರದಾಡಿದ ವೆಂಕಯ್ಯ ನಾಯ್ಡು!

ಟ್ರೆಂಡ್12:24 PM January 19, 2018

ಬೆಂಗಳೂರು(ಜ.19): ಬೆಂಗಳೂರಿನ ಸಂಸದರ ನಿವಾಸದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಪ್ಪಲಿ ಕಳ್ಳತನವಾಗಿದೆ. ಬೆಂಗಳೂರಿನ ಮೋನೋಟೈಪ್​ನಲ್ಲಿರುವ ಸಂಸದ ಪಿ.ಸಿ.ಮೋಹನ್ ಮನೆಗೆ ಆಗಮಿಸಿದ್ದಾಗ ಉಪರಾಷ್ಟ್ರಪತಿಗಳ ಚಪ್ಪಲಿ ಕಳ್ಳತನವಾಗಿದೆ. ಪಿ. ಸಿ.ಮೋಹನ್ ಕುಟುಂಬಸ್ಥರೊಂದಿಗೆ ಉಪಹಾರ ಮುಗಿಸಿ ಹೊರಗೆ ಬಂದ ಉಪರಾಷ್ಟ್ರಪತಿಗಳು ತಮ್ಮ ಚಪ್ಪಲಿ ಕಾಣದೇ ಪರದಾಡಿದ್ದಾರೆ. ಚಪ್ಪಲಿ ಕಳುವಾದ ಸುದ್ದಿ ತಿಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಕೂಡಲೇ ಹತ್ತಿರದ ಬಾಟಾ ಶೋರೂಮ್​ಗೆ ಹೋಗಿ ಹೊಸ ಚಪ್ಪಲಿ ಖರೀದಿಸಿ ತಂದರು. ಚಪ್ಪಲಿ ಬಂದ ಬಳಿಕ ಉಪರಾಷ್ಟ್ರಪತಿ ಬೆಂಗಳೂರು ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ತೆರಳಿದ್ದಾರೆ.

webtech_news18

ಇತ್ತೀಚಿನದು Live TV