ಹುಬ್ಬಳ್ಳಿ: ಚುನಾವಣಾ ಪೂರ್ವ ಹೊಂದಾಣಿಕೆಗೆ ಮಾನ್ಯತೆ ಕೊಡಬೇಕೆಂದು ಸುಪ್ರೀಂ ಕೋರ್ಟ್ ಹೇಳುತ್ತದೆ. ಬಿಜೆಪಿ ಜೊತೆ ಶಿವಸೇನಾ 30 ವರ್ಷಗಳಿಂದ ಇದ್ದರೂ ಜನಾದೇಶದಂತೆ ನಡೆದುಕೊಳ್ಳಲಿಲ್ಲ. ಕಾಂಗ್ರೆಸ್, ಎನ್ಸಿಪಿ ಜೊತೆ ಹೊಂದಾಣಿಕೆಗೆ ಹುನ್ನಾರ ನಡೆಸಿದರು. ಜನರು ಈ ಅನೈತಿಕತೆಯನ್ನು ಒಪ್ಪಲ್ಲ. ಪ್ರಜಾಪ್ರಭುತ್ವ ವ್ಯಸ್ಥೆಯಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಡಳಿತದ ನಿರ್ಣಯ ತೆಗೆದುಕೊಳ್ಳಬೇಕಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.