ಹೋಮ್ » ವಿಡಿಯೋ » ರಾಜ್ಯ

ಪ್ರವಾಹ ಸಂತ್ರಸ್ತರಿಗೆ ಐದು ಕೋಟಿ ಪರಿಹಾರ ನೀಡಿದ ರಿಲಯನ್ಸ್​

ರಾಜ್ಯ18:01 PM September 06, 2019

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ RIL ವತಿಯಿಂದ 5 ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ. RILನ ರಿಲಯನ್ಸ್ ಫೌಂಡೇಷನ್ ಮುಖಾಂತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗಾಗಿ, ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ಚೆಕ್ ನೀಡಲಾಯ್ತು. ಇವತ್ತು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಪದಾಧಿಕಾರಿಗಳು, 5 ಕೋಟಿ ರೂಪಾಯಿಯ ಚೆಕ್ ಹಸ್ತಾಂತರಿಸಿದರು. RIL ಸ್ಟೇಟ್ ಮೆಂಟರ್ ಹಾಗೂ ಉಪಾಧ್ಯಕ್ಷ ಜಿಮ್ಮಿ ಅಮ್ರೋಲಿಯಾ, ಜಿಯೋ ಸಿಇಒ ಅಮಿತಾಭ್ ಭಾಟಿಯಾ ಹಾಗೂ ರಿಲಯನ್ಸ್ ರಿಟೇಲ್​ನ ಬ್ಯುಸಿನೆಸ್ ಹೆಡ್ ವಿಪಿನ್ ತ್ಯಾಗಿ, ಮುಖ್ಯಮಂತ್ರಿಗಳಿಗೆ ರಿಲಯನ್ಸ್ ಫೌಂಡೇಷನ್ ವತಿಯಿಂದ 5 ಕೋಟಿ ರೂಪಾಯಿಯ ಪರಿಹಾರ ಚೆಕ್ ಹಸ್ತಾಂತರಿಸಿದ್ರು.

Shyam.Bapat

ಇತ್ತೀಚಿನದು

Top Stories

//