ಹೋಮ್ » ವಿಡಿಯೋ » ರಾಜ್ಯ

ರಾಮಲಿಂಗಾರೆಡ್ಡಿ ವರಸೆ ಬದಲಿಸಿದ್ದಾರೆ, ನಾವು ರಾಜೀನಾಮೆ ವಾಪಸ್​ ಪಡೆಯಲ್ಲ; ರೆಬೆಲ್​ ಶಾಸಕ ಎಸ್​.ಟಿ.ಸೋಮಶೇಖರ್​​

ರಾಜ್ಯ11:28 AM July 18, 2019

ಮುಂಬೈ ಹೋಟೆಲ್​ನಲ್ಲಿರುವ ಅತೃಪ್ತ ಶಾಸಕರು ರಾಜೀನಾಮೆ ಹಿಂಪಡೆದ ಕಾಂಗ್ರೆಸ್​ ನಾಯಕ ರಾಮಲಿಂಗಾರೆಡ್ಡಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ರೆಬೆಲ್​ ಶಾಸಕರು ಮುಂಬೈ ಹೋಟೆಲ್​​ನಿಂದಲೇ ಇಂದು ಮತ್ತೊಂದು ವಿಡೀಯೋ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೆಬೆಲ್​ ಶಾಸಕ ಎಸ್​.ಟಿ. ಸೋಮಶೇಖರ್​ ರಾಮಲಿಂಗಾರೆಡ್ಡಿ ವಿರುದ್ಧ ಕಿಡಿಕಾರಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ ಅಂತಾ ರಾಮಲಿಂಗಾರೆಡ್ಡಿ ನಮಗೆ ಭರವಸೆ ನೀಡಿದ್ದರು. ಆದರೆ ಇದೀಗ ವರಸೆ ಬದಲಿಸಿದ್ದಾರೆ. ಈ ವಿಚಾರದಲ್ಲಿ ಭೈರತಿ ಬಸವರಾಜ್, ನಾನು ಹಾಗೂ ಮುನಿರತ್ನ ರಾಮಲಿಂಗಾರೆಡ್ಡಿ ಅವರನ್ನು ಫಾಲೋ ಮಾಡಲ್ಲ. ನಾವು ರಾಜೀನಾಮೆ ವಾಪಸ್ ಪಡೆಯಲ್ಲ ಎಂದು ಮುಂಬೈ ಹೊಟೇಲ್ ನಲ್ಲೇ ಕುಳಿತು ವಿಡಿಯೋ ರಿಲೀಸ್ ಮಾಡಿದ್ದಾರೆ.

sangayya

ಇತ್ತೀಚಿನದು

Top Stories

//