ಬಾಗಲಕೋಟೆ: 2018-2019ನೇ ಸಾಲಿನಲ್ಲಿ ಬಡವರಿಗೆ ಸೂರು ನೀಡದೇ ವಂಚಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ.ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ.ಕರ್ನಾಟಕ ದಲಿತ ಸೇನಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ.ಡಾ,ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಡಿ ವಸತಿ ಯೋಜನೆಯಲ್ಲಿ ಅರ್ಹರಿಗೆ ವಸತಿ ನೀಡಿಲ್ಲವೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ.ಮನವಿ ಸ್ವೀಕರಿಸಲು ಬಂದ ಅಧಿಕಾರಿಗಳೊಂದಿಗೆ ಪ್ರತಿಭಟನಾ ನಿರತರು ವಾಗ್ವಾದ.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ,ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹ.ಪ್ರತಿಭಟನಾ ನಿರತರ ವಾಗ್ವಾದ ಹಿನ್ನೆಲೆ ಮನವಿ ಸ್ವೀಕರಿಸಿದೇ ವಾಪಸ್ಸಾದ ಅಧಿಕಾರಿಗಳು.ಜಿಪಂ ಉಪಕಾರ್ಯದರ್ಶಿ ಸೇರಿ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ರು.ಜಿಲ್ಲಾಡಳಿತ ಭವನದ ಎದುರು ಮುಂದುವರೆದ ಪ್ರತಿಭಟನೆ.