ಐತಿಹಾಸಕ ದಸರಾ ಹಬ್ಬದ ಆಯುಧ ಪೂಜೆ ಪ್ರಯುಕ್ತ ಇಂದು ಮೈಸೂರಿನಲ್ಲಿ ಗತ ವೈಭವ ಮರುಕಳಿಸಿತ್ತು. ಸವಾರಿ ತೊಟ್ಟಿಯಲ್ಲಿ ಪೊಲೀಸ್ ಬ್ಯಾಂಡ್ ಆಯೋಜಿಸಲಾಗಿತ್ತು. ಹಲವಾರು ಪೊಲೀಸರು ವಾದ್ಯಗಳನ್ನು ನುಡಿಸುವ ಮೂಲಕ ಗಮನ ಸೆಳೆದರು. ಈ ದೃಶ್ಯವನ್ನು ತಮ್ಮ ನಿವಾಸದ ಕಿಟಕಿಯಿಂಲದೇ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕಣ್ತುಂಬಿಕೊಂಡರು. ಅವರ ಜೊತೆ ಇತರೆ ಕುಟುಂಬಸ್ಥರೂ ನಿಂತು ವಾದ್ಯ ಗೋಷ್ಠಿಯನ್ನು ನೋಡುತ್ತಿದ್ದ ದೃಶ್ಯ ಕಂಡುಬಂದಿತು.